ಕ್ರೈಂ

ತೊಡಿಕಾನ: ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ನ್ಯೂಸ್ ನಾಟೌಟ್ : ಕೊಳೆತ ಸ್ಥಿತಿಯಲ್ಲಿ ತೊಡಿಕಾನದ ಅಡ್ಯಡ್ಕ ಚಾಂಚಾಡಿನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.

ಮೃತಪಟ್ಟವರನ್ನು ವಿಮಲ (ಗುಬ್ಬಿ) ಎಂದು ಗುರುತಿಸಲಾಗಿದೆ. ಅವರಿಗೆ 57 ವರ್ಷವಾಗಿತ್ತು. ಅವರು 10 ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯ ಮೃತ ದೇಹವು ದುರ್ನಾತ ಬೀರುತ್ತಿತ್ತು. ಈ ಹಿನ್ನೆಲೆಯಲ್ಲಿ ಮೆನೆಯೊಳಗೆ ಪರೀಕ್ಷಿಸಿದಾಗ ಮೃತಪಟ್ಟ ವಿಚಾರ ಬೆಳಕಿಗೆ ಬಂದಿದೆ. ಮೃತರು ಓರ್ವ ಪುತ್ರನನ್ನು ಅಗಲಿದ್ದಾರೆ.  ಮೃತಪಟ್ಟ ವಿಚಾರವನ್ನು ಊರವರು ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸಂಪಾಜೆ ವಿಪತ್ತುನಿರ್ವಹಣಾ ಘಟಕದ ಸದಸ್ಯರ ಗಮನಕ್ಕೆ ತಂದರು. ಸ್ಪಂದಿಸಿದ ವಿಪತ್ತು ನಿರ್ವಹಣಾ ಘಟಕದವರು ಸುಳ್ಯ ಸ್ಮಶಾನಕ್ಕೆ ಶವವನ್ನು ತಂದು ದಹನ ಕಾರ್ಯ ಮಾಡಿದರು ಎಂದು ತಿಳಿದು ಬಂದಿದೆ.

Related posts

ವಾಲಿಬಾಲ್‌ ಆಡುತ್ತಿದ್ದಾಗ ಮೈದಾನದಲ್ಲೇ ಕುಸಿದು ಯುವಕ ದುರಂತ ಅಂತ್ಯ

ಕೇರಳದ ನ್ಯಾಯಾಧೀಶರ ಎದುರು ಸುಳ್ಯದ ವೈದ್ಯೆಯ ಉದ್ದಟತನ..!, ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ನ್ಯಾಯಾಧೀಶ, ಪ್ರಕರಣ ದಾಖಲು

ಸುಳ್ಯ: ನಿಯಂತ್ರಣ ತಪ್ಪಿ ಕಾರು ಪಲ್ಟಿ, ಸೇರಿದ ಜನಸ್ತೋಮ