ಕರಾವಳಿಕೊಡಗುಸುಳ್ಯ

ಕೊಡಗು ಸಂಪಾಜೆ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿಯುವ ಭೀತಿ..! ಈ ಸಲವೂ ಸ್ಥಗಿತಗೊಳ್ಳುವುದೇ ಮಡಿಕೇರಿ-ಮಂಗಳೂರು ರಸ್ತೆ ಸಂಚಾರ?

ನ್ಯೂಸ್ ನಾಟೌಟ್: ಪ್ರತಿ ಸಲದಂತೆ ಕೊಡಗು ಭಾಗದಲ್ಲಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮತ್ತೊಮ್ಮೆ ಬಿರುಕು ಬಿಟ್ಟಿದೆ. ಇದು ವಾಹನ ಸವಾರರಲ್ಲಿ ಆತಂಕ ಮೂಡಿಸುವಂತೆ ಮಾಡಿದೆ.

ಮಡಿಕೇರಿ ತಾಲೂಕಿನ ಕೊಡಗು ಸಂಪಾಜೆಯ ಕೊಯನಾಡು ಸಮೀಪದ ಫಾರೆಸ್ಟ್‌ ಡಿಪೋ ಬಳಿ ಬಿರುಕು ಕಾಣಿಸಿಕೊಂಡಿದೆ. ಈ ಬಿರುಕು ಕಳೆದ ವರ್ಷ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿತ್ತು. ಇದೀಗ ಮಳೆ ಆರಂಭವಾಗುತ್ತಿದ್ದಂತೆ ಬಿರುಕು ಪ್ರಮಾಣ ಹೆಚ್ಚಾಗಿದೆ. ಘನ ವಾಹನಗಳು ಸಂಚರಿಸಿದರೆ ಕುಸಿಯುವ ಆತಂಕ ಕೂಡ ಸ್ಥಳೀಯರಿಂದ ವ್ಯಕ್ತವಾಗಿದೆ. ಹೀಗಾಗಿ ಕೂಡಲೇ ಅದನ್ನು ಸರಿಪಡಿಸಬೇಕು ಎನ್ನುವ ಒತ್ತಾಯವೂ ಕೇಳಿ ಬಂದಿದೆ. ಕಳೆದ ವರ್ಷ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಸಲ ಬಿರುಕು ಕಾಣಿಸಿಕೊಂಡಿತ್ತು. ಇದರಿಂದ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಹಲವು ಸಲ ಸಂಚಾರಕ್ಕೆ ಯೋಗ್ಯವಿಲ್ಲ ಎಂದು ರಸ್ತೆಯನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ವಾಹನ ಸವಾರರು ಸಿಕ್ಕಾಪಟ್ಟೆ ಕಿರಿಕಿರಿ ಅನುಭವಿಸಿದ್ದರು. ಅದರಲ್ಲೂ ಘನ ವಾಹನಗಳ ಸಂಚಾರವನ್ನು ಹಲವು ದಿನಗಳ ಕಾಲ ತಡೆ ಹಿಡಿದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Related posts

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಹಾಯ ಮಾಡಿದ್ದು ಬಿಜೆಪಿ ಅಲ್ಲ..ಹಿಂದೂ ಮಹಾಸಭಾ ಕೆಂಡಾಮಂಡಲ

ಪುತ್ತೂರು: ಜಯಶ್ರೀ ಮರ್ಡರ್ ಕೇಸ್,ಕೃತ್ಯಕ್ಕೆ ಬಳಸಿದ ಆಯುಧ,ಸ್ಕೂಟರ್ ಪೊಲೀಸ್ ವಶಕ್ಕೆ

ಸುಳ್ಯ ನಗರದ ಕುಡಿಯುವ ನೀರಿನ ಬಣ್ಣ ನೋಡಿ, ‘ಕಳೆಂಕ್’.. ‘ಕಳೆಂಕ್’ ವಾಟರ್..! ಕುಡಿದ್ರೆ ಅಷ್ಟರೋಗಗಳ ಸಮಗ್ರ ದರ್ಶನ..!