ಕರಾವಳಿ

ಅವಿಭಕ್ತ ಸೌತ್ ಕೆನರಾ ಜಿಲ್ಲೆಯ ಭಾಗವಾಗಿದ್ದ ಕಾಸರಗೋಡಿನಿಂದ ವ್ಯಾಪಾರಕ್ಕೆಂದು ಬಂದ್ರು

ನ್ಯೂಸ್ ನಾಟೌಟ್: ಪ್ರತಿಯೊಂದು ಕುಟುಂಬಕ್ಕೂ ವಿಶೇಷತೆ, ವಿಭಿನ್ನತೆ ಇದೆ. ಸಮಾಜ ಸೇವೆ, ಕೃಷಿ, ಉದ್ಯಮದಂತಹ ಮಾದರಿ ಕೆಲಸಗಳಿಂದ ಜನ ಜೀವನಕ್ಕೆ ಹತ್ತಿರವಾಗಿರುತ್ತಾರೆ. ಅನೇಕರ ಪಾಲಿಗೆ ಆಪತ್ಪಾಂದವರಾಗಿರುತ್ತಾರೆ. ಅಂತಹ ಕುಟುಂಬಗಳು ಎಷ್ಟೋ ಸಲ ಮುನ್ನಲೆಗೇ ಬಂದಿರುವುದಿಲ್ಲ. ಅಂತಹ ಕುಟುಂಬಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೆಕ್ಕಿಲ್ ಮನೆತನವೂ ಕೂಡ ಒಂದಾಗಿದೆ ಅನ್ನುವುದು ವಿಶೇಷ.

ತೆಕ್ಕಿಲ್ ಮನೆತನ ಮೂಲತಃ ಕಾಸರಗೋಡು ಹಿನ್ನೆಲೆಯುಳ್ಳದ್ದಾಗಿದೆ. ಮುಸ್ಲಿಂ ಸಂಪ್ರದಾಯಸ್ಥ ಕುಟುಂಬ. ಅಂಗಡಿ, ಮರದ ಉದ್ಯಮ, ವ್ಯಾಪಾರ ಹೀಗೆ ಅನೇಕ ಕೆಲಸಗಳನ್ನು ಮಾಡುತ್ತಾ ಜನರ ನಡುವೆ ಗುರುತಿಸಿಕೊಂಡವರು ಈ ಕುಟುಂಬದವರು. ಇಂದಿಗೂ ಈ ಕುಟುಂಬ ಬಹಳಷ್ಟು ಸಮಾಜ ಸೇವೆ ಮಾಡುತ್ತಾ ಬಂದಿದ್ದು ಜನಮಾನಸದಲ್ಲಿ ಹೆಚ್ಚು ಚಿರಪರಿಚಿತರಾಗಿದ್ದಾರೆ.

ಪೊಲೀಸ್‌, ವೈದ್ಯಾಧಿಕಾರಿಗಳು, ವಕೀಲರು, ಧಾರ್ಮಿಕ ಪಂಡಿತರು, ಶಿಕ್ಷಕರು, ರಾಜಕಾರಣಿ ಗಳು ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರದಲ್ಲೂ ಈ ಮನೆತನದ ವ್ಯಕ್ತಿಗಳು ತಮ್ಮದೇ ಆದ ರೀತಿಯಲ್ಲಿ ಚಾಪು ಮೂಡಿಸುತ್ತಿದ್ದಾರೆ. ಅಲ್ಲದೆ ಈ ಕುಟುಂಬದವರು ಪ್ರಥಮವಾಗಿ ಸುಳ್ಯದಲ್ಲಿ ಗೂಡ್ಸ್ ಟ್ರಾನ್ಸ್‌ ಪೊರ್ಟೆಶನ್ ಆರಂಭಿಸಿದವರು, ಮದರಸ ಶಿಕ್ಷಣ, ಶಾಲೆ ಹೀಗೆ ಎಲ್ಲ ಕ್ಷೇತ್ರದಲ್ಲೂ ತೆಕ್ಕಿಲ್ ಮನೆತನದ ಸದಸ್ಯರು ಸಕ್ರೀಯವಾಗಿದ್ದಾರೆ. ಕಾಸರಗೋಡು, ಸುಳ್ಯ ತಾಲೂಕು, ಸಂಪಾಜೆಯ ಚಟ್ಟೆಕಲ್ಲು, ಕೊಡಗು ಜಿಲ್ಲೆಗಳಲ್ಲಿ ತೆಕ್ಕಿಲ್ ಕುಟುಂಬವಿದೆ.

ಇತಿಹಾಸ ಹೊಂದಿರುವ ತೆಕ್ಕಿಲ್ ಮನೆತನದ ಒಕ್ಕೂಟವನ್ನು ಮತ್ತು ಸಮಿತಿಯನ್ನು ಇತ್ತೀಚೆಗೆ ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕದ ತೆಕ್ಕಿಲ್ ತರವಾಡು ಮನೆಯಲ್ಲಿ ಕುಟುಂಬದ ಸದಸ್ಯರು ಸಭೆ ಸೇರಿ ಹೊಸ ಸಮಿತಿಯನ್ನು ರಚಿಸಲಾಯಿತು.ಈ ಸಂದರ್ಭದಲ್ಲಿ ಕುಟುಂಬದ ಹಲವಾರು ಹಿರಿಯ ಕಿರಿಯ ಸದಸ್ಯರು ಹಾಜರಿದ್ದು, ಕುಟುಂಬದ ಹಿನ್ನೆಲೆ ಸಮಾಜ ಸೇವೆ, ಧಾರ್ಮಿಕ ಕ್ಷೇತ್ರ, ಸಾಮಾಜಿಕ ಕ್ಷೇತ್ರ, ಕೃಷಿ,ಉದ್ಯಮ, ಶಾಲೆ, ಮದರಸ, ಮತ್ತು ಕೋಮು ಸೌಹಾರ್ದತೆಗೆ ಕುಟುಂಬ ಹಿರಿಯರು ಕಳೆದ ಇನ್ನೂರು ವರ್ಷಗಳಿಂದ ಅವಿಭಜಿತ ಸೌತ್ ಕೆನರಾ (ದಕ್ಷಿಣ ಕನ್ನಡ) ಜಿಲ್ಲೆಯ ಭಾಗವಾದ ಕಾಸರಗೋಡು, ದಕ್ಷಿಣ ಕನ್ನಡ ಅಲ್ಲದೆ ಕೊಡಗು ಜಿಲ್ಲೆಯ ಸಹಿತ ಎರಡು ರಾಜ್ಯಗಳ ವಿವಿಧ ಭಾಗಗಳಲ್ಲಿ ನೀಡಿದ ಕೊಡುಗೆಯನ್ನು  ಹಿರಿಯರು ಸ್ಮರಿಸಿದರು. ಟಿ ಎ ಖಾಲಿದ್ ತೆಕ್ಕಿಲ್ ಪೇರಡ್ಕ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿಯಾದ ಅಶ್ರಫ್ ಟರ್ಲಿ ತೆಕ್ಕಿಲ್  ಸ್ವಾಗತಿಸಿದರು.

ಸಮಿತಿಯ ಗೌರವಾಧ್ಯಕ್ಷರಾಗಿ ಇಬ್ರಾಹಿಂ ತೆಕ್ಕಿಲ್ ಚೊಕ್ಕಾಡಿ, ಅಧ್ಯಕ್ಷರಾಗಿ ಟಿ. ಎಂ. ಶಾಹಿದ್ ತೆಕ್ಕಿಲ್, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಟರ್ಲಿ ತೆಕ್ಕಿಲ್ ಬೆಂಗಳೂರು, ಕೋಶಾಧಿಕಾರಿಯಾಗಿ ಟಿ.ಎಂ. ಖಾಲಿದ್ ತೆಕ್ಕಿಲ್ ಸುಳ್ಯರವರನ್ನು ಸರ್ವಾನುಮತದಿಂದ ಆರಿಸಲಾಯಿತು.

ಇಬ್ರಾಹಿಂ ತೆಕ್ಕಿಲ್ ಚೊಕ್ಕಾಡಿ, ಗೌರವಾಧ್ಯಕ್ಷ
ಟಿಎಂ ಶಹೀದ್ ತೆಕ್ಕಿಲ್, ಅಧ್ಯಕ್ಷರು
ಅಶ್ರಫ್ ಟರ್ಲಿ ತೆಕ್ಕಿಲ್, ಪ್ರಧಾನ ಕಾರ್ಯದರ್ಶಿ
ಟಿ.ಎಂ. ಖಾಲಿದ್ ತೆಕ್ಕಿಲ್ , ಕೋಶಾಧಿಕಾರಿ

ಉಪಾಧ್ಯಕ್ಷರುಗಳಾಗಿ,ಅಬ್ದುಲ್ಲ ಟಿ ಬಿ ತೆಕ್ಕಿಲ್ ಗೂನಡ್ಕ , ಮಹಮ್ಮದ್ ಕುಂಞ ಟ.ಎ. ತೆಕ್ಕಿಲ್ ಪೇರಡ್ಕ ಗೂನಡ್ಕ , ಆರಿಫ್  ಟಿ. ಇ. ತೆಕ್ಕಿಲ್ ಪೇರಡ್ಕ ಗೂನಡ್ಕ  , ಕಾರ್ಯಧರ್ಶಿಗಳಾಗಿ,ಪಾರೆಕ್ಕಲ್ ಮನ್ಸೂರ್ ಕೆ. ಎಂ. ತೆಕ್ಕಿಲ್ ಅರಂತೋಡು,  ರಿಯಾಸ್ ತೆಕ್ಕಿಲ್ , ಜಾಫರ್ ಟಿ. ಎಂ. ತೆಕ್ಕಿಲ್ ಗೂನಡ್ಕ  ಸಮಿತಿಯ ಸಧಸ್ಯರುಗಳಾಗಿ, ಜಾಫರ್ ಸಾದಿಕ್ ಎಸ್. ಎ. ತೆಕ್ಕಿಲ್ ಮಂಗಳೂರು , ಸಾದಿಕ್ ಮಾಸ್ಟರ್ ಚಟ್ಟೆಕ್ಕಲ್ ಕಲ್ಲುಗುಂಡಿ , ಅಯ್ಯೂಬ್ ದರ್ಕಾಸ್ ಗೂನಡ್ಕ ಬೆಂಗಳೂರು , ಅಮೀರ್ ಪಿ. ಎಂ ಪೇರಡ್ಕ ಬೆಂಗಳೂರು , ಜುರೈದ್ ತೆಕ್ಕಿಲ್ ಪೇರಡ್ಕ ಕಾಸರಗೋಡು , ಆರಿಸ್ ಸಿ. ಎ.,  ಅಶ್ರಫ್ ಎ. ಟಿ. ದೊಡ್ಡಡ್ಕ ಗೂನಡ್ಕ , ಭಾತಿಷಾ ಮತ್ತಿತರರು ಆಯ್ಕೆಯಾದರು.

Related posts

ಟೀಂ ಸುಳ್ಯ ಇನ್ ಬೆಂಗಳೂರು..! ಏನಿದು ಸುಳ್ಯದ ಯುವಕರ ವಾಟ್ಸಾಪ್ ಗ್ರೂಪ್, ಮೀಟ್ ದಿ ಟೀಂ..?

ಮನೆಯಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು

ಜಾತ್ರೆ ಅಂಗಡಿಗಳಿಗೆ ಶರತ್ ಪಂಪ್ ವೆಲ್ ಕೇಸರಿ ಧ್ವಜ ನೆಟ್ಟದ್ದೇಕೆ? ಕೇಸರಿ ಧ್ವಜ ಹಾಕಿರುವ ಅಂಗಡಿಗಳಲ್ಲಿ ಮಾತ್ರ ವ್ಯಾಪಾರ ಮಾಡಬೇಕೆ? ಇಲ್ಲಿದೆ ವಿಡಿಯೋ