ಕರಾವಳಿಕ್ರೈಂಸುಳ್ಯ

ಸುಳ್ಯ: ಕಾಂಗ್ರೆಸ್‌ ಮುಖಂಡ ಎಸ್‌. ಸಂಶುದ್ದೀನ್‌ ಮನೆಗೆ ನುಗ್ಗಿದ ಕಳ್ಳರು; ಚಿನ್ನಾಭರಣ ಕಳವು

ನ್ಯೂಸ್‌ ನಾಟೌಟ್‌: ಸುಳ್ಯ ನಗರ ಪಂಚಾಯತ್‌ ಮಾಜಿ ಅಧ್ಯಕ್ಷ ಎಸ್‌. ಸಂಶುದ್ದೀನ್‌ ಅವರ ಮನೆಗೆ ಕಳ್ಳರು ನುಗ್ಗಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.20 ಲಕ್ಷ ಮೌಲ್ಯದ ಚಿನ್ನಾಭರಣ ಕಳವುಗೈದಿರುವುದಾಗಿ ಮಾಹಿತಿ ಲಭಿಸಿದೆ.

ಸಂಶುದ್ದೀನ್‌ ಮತ್ತು ಮನೆಯವರು ಮಂಗಳೂರಿಗೆ ತೆರಳಿದ್ದರು. ಈ ಸಮಯವನ್ನು ಸದುಪಯೋಗಿಸಿಕೊಂಡ ಕಳ್ಳರು ಕೃತ್ಯವೆಸಗಿದ್ದಾರೆ. ಮಂಗಳೂರಿನಿಂದ ನಿನ್ನೆ ರಾತ್ರಿ ವಾಪಾಸ್‌ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸುಳ್ಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಶ್ವಾನದಳವನ್ನು ಕರೆಸಲಾಗಿದೆ.

Related posts

ಮೊಬೈಲ್ ಅಂಗಡಿಗೆ ಪೊಲೀಸರಿಂದ ದಾಳಿ, ಇ-ಸಿಗರೇಟ್ ವಶಕ್ಕೆ

ಹಳ್ಳಕ್ಕೆ ಬಿದ್ದು ಪರದಾಡುತ್ತಿರುವ ಕಾಡಾನೆ

ಶಿಕ್ಷಕನ ಕೆನ್ನೆಗೆ ಬಾರಿಸಿದ ವಿದ್ಯಾರ್ಥಿ..! ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ವೇಳೆ ಘಟನೆ..! ಇಲ್ಲಿದೆ ವೈರಲ್ ವಿಡಿಯೋ