ಕ್ರೈಂದೇಶ-ವಿದೇಶವೈರಲ್ ನ್ಯೂಸ್

ರಾತ್ರಿ ಕಳ್ಳತನಕ್ಕೆ ಬಂದವನು ಮಹಿಳೆಗೆ ಕಿಸ್ ಕೊಟ್ಟು ಪರಾರಿ..! ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಹೇಳಿದ್ದೇನು..?

ನ್ಯೂಸ್ ನಾಟೌಟ್: ಕಳ್ಳತನ ಮಾಡಲು ಮನೆಯೊಂದಕ್ಕೆ ನುಗ್ಗಿದ ಖದೀಮನಿಗೆ ಬೆಳೆಬಾಳುವ ವಸ್ತುಗಳು ಸಿಗದಿದ್ದಾಗ ಮನೆಯಲ್ಲಿದ್ದ ಮಹಿಳೆಗೆ ಮುತ್ತು ಕೊಟ್ಟು ಪರಾರಿಯಾದ ವಿಚಿತ್ರ ಘಟನೆ ಮುಂಬೈನ ಹೊರವಲಯದ ಮಲಾಡ್ ಎಂಬಲ್ಲಿ ನಡೆದಿದೆ.

ಕಳೆದ ಜನೆವರಿ 3 ರಂದು ಈ ಘಟನೆ ನಡೆದಿದ್ದು, ಜ. 6 ರಂದು ಆರೋಪಿ ಪತ್ತೆಯಾಗಿದ್ದಾನೆ. ಇದರಿಂದ ಆಘಾತಕ್ಕೆ ಒಳಗಾದ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ಕೃತ್ಯದ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ, ಕಿರುಕುಳ ಮತ್ತು ದರೋಡೆ ಯತ್ನದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿ ಮಲಾಡ್‌ ನ ಕುರಾರ್‌ ನಿವಾಸಿಯಾಗಿದ್ದು, ಯಾವುದೇ ಕೆಲಸವಿಲ್ಲದೆ ನಿರುದ್ಯೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಸುಮಾರು 38 ವರ್ಷದ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಒಳಗಿನಿಂದ ಬಾಗಿಲು ಲಾಕ್ ಮಾಡಿದ್ದಾನೆ. ನನ್ನ ಬಾಯಿ ಮುಚ್ಚಿಸಿ ಬೆಲೆ ಬಾಳುವ ಮೊಬೈಲ್, ವಸ್ತುಗಳು, ನಗದು ಹಣ, ಎಟಿಎಂ ಕಾರ್ಡ್ ನೀಡುವಂತೆ ಕೇಳಿದ್ದಾನೆ. ಆದರೆ ನಾನು ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳಿಲ್ಲ,ಚಿನ್ನಾಭರಣಗಳಿಲ್ಲ ಎಂದು ಹೇಳಿದ್ದೇನೆ. ಆಗ ಆರೋಪಿ ನನಗೆ ಮುತ್ತಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತ ಮಹಿಳೆ ಘಟನೆಯ ಬಗ್ಗೆ ತಿಳಿಸಿದ್ದಾಳೆ.

ಆರೋಪಿಯ ವಿಚಾರಣೆ ನಡೆಸುತ್ತಿರುವ ಕುರಾರ್ ಪೊಲೀಸರು ಹೇಳುವಂತೆ, ಆರೋಪಿಗೆ ಈ ಹಿಂದೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆರೋಪಿ ಕುಟುಂಬಸ್ಥರೊಂದಿಗೆ ವಾಸಿಸುತ್ತಿದ್ದು, ಪ್ರಸ್ತುತ ನಿರುದ್ಯೋಗಿಯಾಗಿದ್ದಾನೆ, ಕುಟುಂಬ ನಿರ್ವಹಣೆಗೆ ಈ ಕೃತ್ಯವೆಸಗಿರುವ ಸಾಧ್ಯತೆಯಿದೆ ಪ್ರಕರಣ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Click

https://newsnotout.com/2025/01/actress-ramya-attend-court-kannada-news-viral-news-d/
https://newsnotout.com/2025/01/kannada-news-house-kannada-news-14-acre-home-viral-news-police/
https://newsnotout.com/2025/01/actor-vishal-hospitalized-in-apolo-chennai-kannada-news-viral-jd/
https://newsnotout.com/2025/01/kannada-news-nepala-kannada-news-india-nepala-news/
https://newsnotout.com/2025/01/darshan-thugudeepa-kannada-news-viral-issue-police-department-appeal-d/
https://newsnotout.com/2025/01/mangaluru-mangaluru-central-jail-kannada-news-d/
https://newsnotout.com/2025/01/naxal-wrote-a-latter-to-karnataka-and-kerala-govt-as-surrender-latter/
https://newsnotout.com/2025/01/hmpv-kannada-news-health-jp-nadda-announces-road-map-and-health-care/

Related posts

ಅಸಲಿ ಆಭರಣಗಳನ್ನು ಕದ್ದು ಅಂತದ್ದೇ ನಕಲಿ ಆಭರಣವನ್ನು ದೇವಿಗೆ ತೊಡಿಸಿದ್ದ ಅರ್ಚಕ..! ಶ್ರೀ ಮಹಾಂಕಾಳಿ ದೇವಸ್ಥಾನದ 21ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು..!

7 ವರ್ಷದ ಬಳಿಕ ಭಾರತಕ್ಕೆ ಬಂದ ಪಾಕ್ ಕ್ರಿಕೆಟಿಗರಿಗೆ ‘ಕೇಸರಿ’ ಶಾಲು ಹಾಕಿ ಸ್ವಾಗತಿಸಿದ ಭಾರತ..! ಪಾಕ್ ಸೇರಿದಂತೆ ವಿಶ್ವಕಪ್ ಆಡಲು ಬರುವ 10 ತಂಡದ ಆಟಗಾರರಿಗೆ ಗೋಮಾಂಸ ಕೊಡಲ್ಲ..!

ನಾನು ಐಶಾರಾಮಿ ಹೋಟೆಲ್‌ ಹೊರಗೆ ಭಿಕ್ಷುಕಿಯಾಗಿ ನಿಂತಿದ್ದೆ ಎಂದದ್ದೇಕೆ ಈ ಖ್ಯಾತ ನಟಿ..! ನಿನ್ನೆಯಿಂದ ಏನನ್ನೂ ತಿಂದಿಲ್ಲ ಎಂದದ್ದಕ್ಕೆ ಬಿಸ್ಕೆಟ್‌ ಕೊಟ್ಟರು..!