ದೇಶ-ಪ್ರಪಂಚ

ಪ್ರೀತಿಸಿ ಯುವಕನಿಗೆ ಕೈ ಕೊಟ್ಟ ಯುವತಿ : ಮನೆಗೆ ನುಗ್ಗಿ ರೇಪ್ ಮಾಡಿ ಕೊಲೆ ಮಾಡಿದ ಪ್ರೇಮಿ!

ನ್ಯೂಸ್ ನಾಟೌಟ್: ಪ್ರೀತಿಸಿ ಯುವಕನಿಗೆ ಕೈ ಕೊಟ್ಟ ಯುವತಿಯನ್ನು ರೇಪ್ ಮಾಡಿ ಕೊಲೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕೆ.ಪಿ. ಅಗ್ರಹಾರದ ಯುವಕನೊಬ್ಬ ತಾನು ಪ್ರೀತಿಸಿದ ಯುವತಿಗೆ ಬೇರೊಬ್ಬರೊಂದಿಗೆ ಮದುವೆ ಫಿಕ್ಸ್‌ ಆಗಿರುವುದನ್ನು ಸಹಿಸಿಕೊಳ್ಳಲಾಗದೇ, ಆಕೆಯ ಮನೆಗೆ ನುಗ್ಗಿ ಬಲವಂತವಾಗಿ ರೇಪ್‌ ಮಾಡಿ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ತನ್ನ ಪ್ರೇಯಸಿ ತನಗೆ ಸಿಗದಿದ್ದರೆ ಬೇರೆ ಯಾರಿಗೂ ಸಿಗಬಾರದು ಎಂದು ಆಕೆಯನ್ನು ಬಲವಂತವಾಗಿ ರೇಪ್‌ ಮಾಡಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವತಿ ಶಾಲಿನಿಗೆ( 22 ) ಮನೆಯಲ್ಲಿ ಬೇರೊಬ್ಬ ಯುವಕನ ಜತೆ ಮದುವೆ ಫಿಕ್ಸ್ ಮಾಡಿದ್ದರು. ಈ ಬಗ್ಗೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ನಿನ್ನೆ ಸಂಜೆ ವೇಳೆ ಶಾಲಿನಿಯ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ಬಂದು ಜಗಳ ಮಾಡಿದ್ದಾನೆ. ನಿಮ್ಮ ಮನೆಯವರು ತೋರಿಸಿದ ಹುಡುಗನನ್ನು ನೀನು ಒಪ್ಪಿಕೊಂಡಿದ್ದರಿಂದಲೇ ಮದುವೆ ಫಿಕ್ಸ್‌ ಆಗಿದೆ ಎಂದು ಮನೋಜ್‌ ಗಲಾಟೆ ಮಾಡಿದ್ದಾನೆ.

ನಂತರ ಶಾಲಿನಿಯನ್ನು ಬೆಡ್ ರೂಂ ಗೆ ಎಳೆತಂದು ರೇಪ್ ಮಾಡಿ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ. ಆಸ್ಪತ್ರೆಯಲ್ಲಿ ಮೃತ ದೇಹವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವೈದ್ಯರು, ಆಕೆಯ ಮೇಲೆ ಬಲವಂತದ ಲೈಂಗಿಕ ಕ್ರಿಯೆ ನಡೆಸಲಾಗಿದೆ. ನಂತರ ಆಕೆಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಕೊಲೆ ಮಾಡಿದ ಆರೋಪಿ ಮನೋಜ್‌ ಯುವತಿಯ ಮನೆಯಿಂದ ಕೆ ಪಿ ಅಗ್ರಹಾರದಲ್ಲಿರುವ ತಮ್ಮ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಸದ್ಯ ಮನೋಜ್‌ನನ್ನು ಕುಟುಂಬದವರು ಅಸ್ಪತ್ರೆಗೆ ದಾಖಲು ಮಾಡಿದ್ದಾರೆ.

Related posts

ಸಾಹಸ ಸಿಂಹನ 74ನೇ ಜನ್ಮದಿನದ ಸವಿನೆನಪು, ಅನ್ನದಾನ, ರಕ್ತದಾನಗಳ ಮೂಲಕ ವಿಷ್ಣುವರ್ಧನ್‌ ರನ್ನು ಸ್ಮರಿಸಿದ ಅಭಿಮಾನಿಗಳು

ವರನಿಲ್ಲದೇ ಸಪ್ತಪದಿ ತುಳಿದ ವಧು,ಹಾಗಾದ್ರೆ ಇದು ಹೇಗೆ ಸಾಧ್ಯ ಆಯ್ತು..ಇಲ್ಲಿದೆ ಡಿಟೇಲ್ಸ್..

ವೈಷ್ಣೋದೇವಿ ಯಾತ್ರೆಗೆ ಹೋಗುತ್ತಿದ್ದಾಗ ಭೀಕರ ಅಪಘಾತ..! 7 ಮಂದಿ ಸಾವು, 25 ಜನರಿಗೆ ಗಾಯ..! ಇಲ್ಲಿದೆ ವಿಡಿಯೋ