ಕರಾವಳಿರಾಜಕೀಯ

ಹಾರಾಡುತ್ತಿದ್ದ ವಿಮಾನದ ಬಾಗಿಲು ತೆಗೆದ ಪ್ರಯಾಣಿಕ..! ಪ್ರಯಾಣಿಕನ ಹುಚ್ಚಾಟಕ್ಕೆ ಬೆಚ್ಚಿಬಿದ್ದ ಸಹ ಪ್ರಯಾಣಿಕರು..!

ನ್ಯೂಸ್ ನಾಟೌಟ್: ಇನ್ನೇನು ವಿಮಾನ ಲ್ಯಾಂಡ್ ಆಗುವ ಹಂತದಲ್ಲಿತ್ತು. ಗಾಳಿಯಲ್ಲಿ ಅತಿವೇಗದಿಂದ ಬರುತ್ತಿದ್ದ ವಿಮಾನದೊಳಗೆ ಪ್ರಯಾಣಿಕರೆಲ್ಲ ಸೀಟ್ ಬೆಲ್ಟ್‌ ಕಟ್ಟಿಕೊಂಡು ವಿಮಾನ ಇಳಿಯುವುದನ್ನೇ ಎದುರು ನೋಡುತ್ತಿದ್ದರು. ಇನ್ನೇನು ವಿಮಾನ ಇಳಿಯಬೇಕು ಅನ್ನುವಷ್ಟರಲ್ಲಿ ಏಷಿಯಾನ ಏರ್‌ ಲೈನ್ಸ್‌ ವಿಮಾನದಲ್ಲಿದ್ದ ಪ್ರಯಾಣಿಕನೊಬ್ಬ ತುರ್ತು ನಿರ್ಗಮನದ ಬಾಗಿಲನ್ನೇ ತೆರೆದಿದ್ದಾನೆ. ಇದರಿಂದ ಜೋರಾಗಿ ಗಾಳಿ ಬೀಸಿದೆ. ಹಲವು ಪ್ರಯಾಣಿಕರು ಅಸ್ವಸ್ಥಗೊಂಡಿದ್ದಾರೆ.

ಸಿಯೋಲ್ ನಲ್ಲಿ ನಡೆದಿರುವ ದುರಂತಕ್ಕೆ ಬೆಚ್ಚಿ ಬೀಳಿಸಿದೆ. ತಕ್ಷಣ ಇದೀಗ ಕಿಡಿಗೇಡಿಯನ್ನು ಬಂಧಿಸಲಾಗಿದೆ. ಮೂಲಗಳ ಪ್ರಕಾರ ರನ್‌ವೇನಿಂದ 200 ಮೀ. ಮೇಲಕ್ಕೆ ವಿಮಾನ ಹಾರಾಟ ನಡೆಸುತ್ತಿದ್ದಾಗ ತುರ್ತು ನಿರ್ಗಮನದ ಬಾಗಿಲನ್ನು ತೆರೆಯಲಾಗಿದೆ ಎಂದು ತಿಳಿದು ಬಂದಿದೆ. ಜೋರಾಗಿ ಬೀಸಿದ ಗಾಳಿಯಿಂದಾಗಿ ೯ ಮಂದಿ ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Related posts

ಸೇನೆಯಿಂದ ನಿವೃತ್ತರಾದ ಭಾಸ್ಕರ ಕಾರಿಂಜ ಹುಟ್ಟೂರಿಗೆ ಆಗಮನ, ಭವ್ಯ ಸ್ವಾಗತ

ಕಾಸರಗೋಡು: ಮೀನುಗಾರಿಕಾ ಬೋಟ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು..! ತನಿಖೆ ನಡೆಸುತ್ತಿರುವ ಪೊಲೀಸರು

ಬೈಕ್‌ಗಳ ನಡುವೆ ಅಪಘಾತ ಓರ್ವನಿಗೆ ಗಾಯ