ಕರಾವಳಿಕ್ರೈಂ

ಬೆಳ್ತಂಗಡಿ:ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ವಿಷಸೇವಿಸಿ ಆತ್ಮಹತ್ಯೆ,ಕಾರಣ ನಿಗೂಢ

ನ್ಯೂಸ್ ನಾಟೌಟ್ : ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟುವಿನಲ್ಲಿ ನಡೆದಿದೆ.ಇಂದಬೆಟ್ಟು ಗ್ರಾಮದ ಕೊಪ್ಪದಕೋಡಿ ನಿವಾಸಿ ದೇವಕಿಯವರ ಪುತ್ರಿ ಕೌಶಲ್ಯ ಮೃತ ಯುವತಿ.

ಕೌಶಲ್ಯ ಅವರಿಗೆ ಇತ್ತೀಚೆಗಷ್ಟೇ ಸೂರ್ಯಬೆಟ್ಟು ನಿವಾಸಿ ಜೊತೆ ವಿವಾಹವಾಗಿತ್ತು.ಆದರೆ ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.ಕಳೆದ ಎರಡು ದಿನಗಳ ಹಿಂದೆ ವಿಷ ಸೇವಿಸಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟದ್ದಾರೆ.ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಡ್ಯಾನ್ಸ್‌ಗೆ ಫಿದಾ ಆದ ನಟ ಕಿಚ್ಚ ಸುದೀಪ್ ..!​ ಹೇಗಿತ್ತು ಗೊತ್ತಾ ಡ್ಯಾನ್ಸ್ ?ಇಲ್ಲಿದೆ ವಿಡಿಯೋ..

ವೃದ್ಧ ಮಾವನಿಗೆ ಮನಬಂದಂತೆ ಚಪ್ಪಲಿಯಲ್ಲಿ ಹೊಡೆದ ಸೊಸೆ..! ತಡೆಯಲು ಪ್ರಯತ್ನಿಸಿದ ಸಾಕು ನಾಯಿ..! ಇಲ್ಲಿದೆ ವೈರಲ್ ವಿಡಿಯೋ

ಕಲ್ಲುಗುಂಡಿ ಚರ್ಚ್ ನಲ್ಲಿ ಕಳ್ಳತನ, ಹುಂಡಿ ಬೀಗ ಮುರಿದು ಹಣ ದೋಚಿದ ಕಳ್ಳ..!