ಸುಳ್ಯ

ಬಾಲಕಿಯನ್ನು ಕೊಲೆಗೈದು ಚೀಲದಲ್ಲಿ ತುಂಬಿಸಿ ಬಾವಿಗೆ ಎಸೆದ ದುಷ್ಕರ್ಮಿಗಳು!

ನ್ಯೂಸ್ ನಾಟೌಟ್: 11 ವರ್ಷದ ಬಾಲಕಿಯನ್ನು ಕೊಲೆಮಾಡಿ ಚೀಲದಲ್ಲಿ ತುಂಬಿಸಿ ಬಾವಿಗೆ ಎಸೆದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿ ಶಾಲೆಗೆ ಹೋಗಿ ಬರುವಷ್ಟರೊಳಗೆ ಹೊಂಚು ಹಾಕಿದ್ದ ದುಷ್ಕರ್ಮಿಗಳು ಆಕೆಯನ್ನು ಹಿಂಬಾಲಿಸಿ ಈ ಕೃತ್ಯ ಎಸಗಿದ್ದಾರೆ.

ರೇಖಾ ಸಂಗಪ್ಪ ಯಂಕಂಚಿ ಎಂಬ ೧೧ ವರ್ಷದ ಬಾಲಕಿ ಶಾಲೆಗೆ ಹೋಗಿದ್ದಳು. ಮಾ. ೧೫ರ ಬೆಳಗ್ಗೆ ೧೦ ಗಂಟೆಯಿಂದ ನಾಪತ್ತೆಯಾದ್ದಳು. ಈಕೆಯನ್ನು ಸ್ಥಳೀಯರು ಸೇರಿ ಎಲ್ಲೆಡೆ ಹುಡುಕಿದರೂ ಬಾಲಕಿ ಸಿಗಲಿಲ್ಲ. ಶುಕ್ರವಾರ ಬಾವಿಯೊಂದರಲ್ಲಿ ಪರಿಶೀಲನೆ ನಡೆಸಿದಾಗ ಆಕೆಯ ಶವ ಪತ್ತೆಯಾಗಿದೆ. ಯಾರೋ ದುಷ್ಕರ್ಮಿಗಳು ಬಾಲಕಿಯನ್ನು ಕೊಲೆಮಾಡಿ ಚೀಲದಲ್ಲಿ ತುಂಬಿಸಿ ಮೃತದೇಹವನ್ನು ಬಾವಿಗೆ ಎಸೆದಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬೀಳಗಿ ಪೊಲೀಸರು ಆಗಮಿಸಿ ಪರೀಶಿಲನೆ ನಡೆಸಿದ್ದಾರೆ.

Related posts

ಸುಳ್ಯ: 50ಕ್ಕೂ ಹೆಚ್ಚು ಔಷಧಿಯ ಗಿಡ ಮೂಲಿಕೆ ಸಸ್ಯಗಳಿಂದ ವಿದ್ಯಾರ್ಥಿಗಳಿಗೆ ಕಷಾಯ..! ಮಳೆಗಾಲದ ಶೀತ, ಕೆಮ್ಮು, ಜ್ವರದಿಂದ ಮಕ್ಕಳನ್ನು ರಕ್ಷಿಸೋಕೆ ಸ್ನೇಹ ಶಾಲೆ ತಂತ್ರ..!

ಸುಳ್ಯ: ಯಶಸ್ವಿ 2 ನೇ ವ‍ರ್ಷಕ್ಕೆ ಪಾದಾರ್ಪಣೆಗೈದ ‘ಗೋಕುಲಂ’ ವಸ್ತ್ರ ಮಳಿಗೆ,’ಬಿಗ್ ಡಿಸ್ಕೌಂಟ್ ಮೇಳ’ದಲ್ಲಿ ಆಕರ್ಷಕ ದರದಲ್ಲಿ ಮುದ್ದು ಮಕ್ಕಳ ಬಟ್ಟೆಗಳು ಲಭ್ಯ

ಸುಳ್ಯ: ಕಲ್ಲಪಳ್ಳಿ ಸಮೀಪ ಮಗುಚಿಬಿದ್ದ ಲಾರಿ,ವಾಹನ ಸಂಚಾರ ಅಸ್ತವ್ಯಸ್ತ