ಕರಾವಳಿ

ಧಾರಾಕಾರ ಮಳೆಗೆ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ..!, ಕರಾವಳಿಯಲ್ಲಿ ಮುಂದುವರಿದ ವರುಣನ ಆರ್ಭಟ

ನ್ಯೂಸ್‌ ನಾಟೌಟ್‌: ಕಳೆದೆರಡು ದಿನಗಳಲ್ಲಿ ಕರಾವಳಿಯಾದ್ಯಂತ ಭಾರಿ ಮಳೆಯಾಗುತ್ತಿದ್ದು ಉಡುಪಿ ಜಿಲ್ಲೆಯ ಶೇಡಿಮನೆ ಗ್ರಾಮದ ಬಡಾಬೈಲು ಎಂಬಲ್ಲಿ ಬಾಲಕಿಯೊರ್ವಳೂ ಹೊಳೆಗೆ ಬಿದ್ದು ಪ್ರವಾಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಘಟನೆ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.

ಮೃತ ಬಾಲಕಿಯನ್ನು ಬಡಾಬೈಲುವಿನ ರಚನಾ(13) ಎಂದು ಗುರುತಿಸಲಾಗಿದೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಈ ಬಾಲಕಿ ಶಾಲೆ ತೊರೆದು ಮನೆಯಲ್ಲಿದ್ದಳು. ಭಾನುವಾರ ತನ್ನ ಅಜ್ಜಿ ಸಾಧಮ್ಮ ಶೆಡ್ತಿ ಜೊತೆ ದನ ಕರುಗಳನ್ನು ಮೇಯಿಸುತ್ತಿರುವಾಗ ಗದ್ದೆಯ ಪಕ್ಕದಲ್ಲಿರುವ ಗಂಗಡಬೈಲು ಹೊಳೆ ಬದಿಗೆ ಹೋದ ರಚನಾ ಆಕಸ್ಮಿಕವಾಗಿ ಕಾಲುಜಾರಿ ಹೊಳೆಗೆ ಬಿದ್ದು ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾಳೆ ಎಂದು ತಿಳಿದುಬಂದಿದೆ.

ನಂತರ ಸುಮಾರು 2 ಕಿ.ಮೀ. ದೂರದ ಶೇಡಿಮನೆ ಗ್ರಾಮದ ಮುಂಡುಬೈಲು ಎಂಬಲ್ಲಿನ ಹೊಳೆನೀರಿನಲ್ಲಿ ರಚನಾಳ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಬೆದ್ರೋಡಿ: ಭೀಕರ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು

ಸ್ನೇಹ ಶಾಲೆಯಲ್ಲಿ ಉಚಿತ ಕಂಪ್ಯೂಟರ್ ಕೌಶಲ್ಯ ತರಬೇತಿ ಉದ್ಘಾಟನೆ

ಸಂಪಾಜೆ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಶ್ರೀ ದೇವರ ಕಾಲಾವಧಿ ಜಾತ್ರೆ ಆಮಂತ್ರಣ ಪತ್ರಿಕೆ ಬಿಡುಗಡೆ, ಕೀಲಾರು ಶ್ಯಾಮ್ ಭಟ್ ಸೇರಿದಂತೆ ಗಣ್ಯರು ಭಾಗಿ