ಕರಾವಳಿಬೆಂಗಳೂರುರಾಜಕೀಯ

ಕಾರು ಹತ್ತುವಾಗ ಕುಸಿದು ಬಿದ್ದ ಮಾಜಿ ಸಿ.ಎಂ. ಸಿದ್ದರಾಮಯ್ಯ , ಅದೃಷ್ಟವಶಾತ್ ಪಾರು

ನ್ಯೂಸ್ ನಾಟೌಟ್ : ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕಾರು ಹತ್ತುವಾಗ ಕುಸಿದು ಬಿದ್ದ ಘಟನೆ ನಡೆದಿದೆ. ತಕ್ಷಣವೇ ಅವರನ್ನು ರಕ್ಷಿಸಲಾಗಿದೆ.ಈ ಘಟನೆ ನಡೆದಿದ್ದು, ಹೊಸಪೇಟೆಯ ಕೂಡ್ಲಿಗಿಯಲ್ಲಿ.ಸಿದ್ದರಾಮಯ್ಯ ಅವರು ಶ್ರೀನಿವಾಸ್‌ ಪರ ಪಟ್ಟಣದಲ್ಲಿ ಪ್ರಚಾರ ಕೈಗೊಳ್ಳಲು ಪಟ್ಟಣ ಹೊರವಲಯದ ಹೆಲಿಪ್ಯಾಡ್‌ಗೆ ಬಂದಿಳಿದಿದ್ದರು.

ಹೆಲಿಪ್ಯಾಡ್‌ ಸುತ್ತ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಬಳಿಕ ಕಾರಿನ ಒಂದು ಬದಿಯಲ್ಲಿ ನಿಂತು ಜನರತ್ತ ಕೈಬೀಸಿದರು. ಬಳಿಕ ಕಾರೊಳಗೆ ಕುಳಿತುಕೊಳ್ಳುವಾಗ ಆಯತಪ್ಪಿ ಬಿದ್ದಂತೆಯೇ ಅಂಗರಕ್ಷಕ ನೆರವಿಗೆ ಧಾವಿಸಿ, ಒಳಗೆ ಕೂರಿಸಿದ್ದಾರೆ.

ಬಳಿಕ ಅವರ ಸಹಾಯಕರೊಬ್ಬರು ನೀರು ಕೊಟ್ಟು ಉಪಚರಿಸಿದರು. ನಂತರ ಸ್ವಲ್ಪ ಸುಧಾರಿಸಿಕೊಂಡು ವೇದಿಕೆ ಕಾರ್ಯಕ್ರಮದತ್ತ ಸಿದ್ದರಾಮಯ್ಯ ತೆರಳಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಬಿಡುವಿಲ್ಲದೆ ಓಡಾಡುತ್ತಿರುವ ಸಿದ್ದರಾಮಯ್ಯ ಬಳಲಿದಂತೆ ಕಂಡು ಬಂದಿದ್ದರು ಎಂದು ವರದಿಯಾಗಿದೆ.

Related posts

ಸುಳ್ಯ: ಮುಗೇರ ಸಮುದಾಯದಿಂದ ಮತದಾನ ಬಹಿಷ್ಕಾರ..! ಡಿ.ಸಿ ಸ್ಥಳಕ್ಕೆ ಬರಲು ಆಗ್ರಹ

ಇಸ್ರೇಲ್ ಪ್ರಧಾನಿ ಜೊತೆ ಪಿಎಂ ಮೋದಿ ದಿಢೀರ್ ಮಾತುಕತೆ ನಡೆಸಿದ್ದೇಕೆ?ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೋದಿ ಬರೆದುಕೊಂಡದ್ದೇನು?

ಕೊನೆಗೂ ಸಂಪಾಜೆ ಹೊಳೆಯ ಹೂಳೆತ್ತುವ ಕಾರ್ಯಕ್ಕೆ ಚಾಲನೆ, ಹವಾಮಾನ ಇಲಾಖೆ ನೀಡಿದ ಮಳೆ, ಗಾಳಿ ಆತಂಕದ ನಡುವೆಯೇ ಪೂರ್ಣಗೊಳ್ಳುವುದೇ ಹೂಳೆತ್ತುವ ಕೆಲಸ?