ಕರಾವಳಿಸುಳ್ಯ

ಕೊಡಲಿಯಿಂದ ಕಡಿದು ಮುದ್ದಾದ ಮಗಳನ್ನೇ ಕೊಂದ ತಂದೆ!,ಅಷ್ಟಕ್ಕೂ ಆಕೆ ಮಾಡಿದ್ದ ತಪ್ಪಾದರೂ ಏನು?

ನ್ಯೂಸ್ ನಾಟೌಟ್ : ವ್ಯಕ್ತಿಯೊಬ್ಬ ತನ್ನ ಮಗಳನ್ನೇ ಕೊಡಲಿಯಿಂದ ಕಡಿದು ಹತ್ಯೆ ಮಾಡಿರುವ ಘಟನೆ ಕೇರಳದ ಆಲಪ್ಪುಳದಲ್ಲಿ ನಡೆದಿದೆ.ಹತ್ಯೆಗೊಳಗಾದ ಬಾಲಕಿಯನ್ನು ನಕ್ಷತ್ರಾ ಎಂದು ಗುರುತಿಸಲಾಗಿದೆ.

ತಮ್ಮ ಪತ್ನಿ ನಾಲ್ಕು ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನೆಲೆ ಪತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಶ್ರೀ ಮಹೇಶ್ ಕೊಲೆ ಆರೋಪಿ.ಇದೀಗ ಮಹೇಶ್ ತನ್ನ ಮಗಳು ನಕ್ಷತ್ರಾಳನ್ನು ಬುಧವಾರದಂದು ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಕೈ ಕೊಡಲಿಯಿಂದ ಕಡಿದಿದ್ದಾನೆ.

ನಕ್ಷತ್ರಾಳ ಕಿರುಚಾಟವನ್ನು ಕೇಳಿ ಪಕ್ಕದ ಮನೆಯಲ್ಲಿ ಮಗಳೊಂದಿಗೆ ವಾಸವಿದ್ದ ಮಹೇಶ್ ತಾಯಿ ಸುನಂದಾ ರವರು ಸ್ಥಳಕ್ಕೆ ಧಾವಿಸಿದ್ದು, ಈ ಸಂದರ್ಭ ಮಹೇಶ್, ತಾಯಿ ಮೇಲೆ ಕೂಡಾ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.ಈ ವೇಳೆ ಅವರ ತಲೆ ಮತ್ತು ಕುತ್ತಿಗೆಗೆ ಗಾಯಗಳಾಗಿವೆ.ಘೋರ ಕೃತ್ಯಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಖಿನ್ನತೆಗೆ ಒಳಗಾಗಿದ್ದಕ್ಕೆ ಈತ ಈ ರೀತಿ ವರ್ತಿಸಿರಬಹುದು ಎಂದು ಶಂಕಸಲಾಗಿದೆ.

Related posts

ಕೊಡಗು ಸಂಪಾಜೆ: ಸಂಭ್ರಮದ ಗೌರಿ ಗಣೇಶೋತ್ಸವಕ್ಕೆ ಕ್ಷಣಗಣನೆ, ಶ್ರೀ ಪಂಚಲಿಂಗೇಶ್ವರನ ಆವರಣದಲ್ಲಿ 30ನೇ ವರ್ಷದ ಗೌರಿ -ಗಣೇಶೋತ್ಸವಕ್ಕೆ ಸರ್ವ ಸಿದ್ಧತೆ

ಕುಂಬ್ರ: ರಿಕ್ಷಾದ ಹಿಂಬದಿಗೆ ಗುದ್ದಿದ ಆಕ್ಟಿವಾ! ಚಾಲಕ ಅಸ್ವಸ್ಥ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಸೆರೆಯಾದ ಮಡಿಕೇರಿಯ ತುಫೈಲ್‌ ಪ್ರಶಾಂತ್‌ ಪೂಜಾರಿ ಕೊಲೆಯಲ್ಲೂ ಭಾಗಿ?