ಕರಾವಳಿಕೊಡಗು

ಮೈಸೂರು:ಭೀಕರ ರಸ್ತೆ ಅಪಘಾತ, 10 ಮಂದಿ ದಾರುಣ ಅಂತ್ಯ-ಹಲವರಿಗೆ ಗಾಯ

ನ್ಯೂಸ್ ನಾಟೌಟ್ : ಖಾಸಗಿ ಬಸ್ ಮತ್ತು ಕಾರ್ ಪರಸ್ಪರ ಡಿಕ್ಕಿಯಾಗಿ ಈ ಘೋರ ದುರಂತವೇ ಸಂಭವಿಸಿದೆ.ಡಿಕ್ಕಿಯಾದ ರಭಸಕ್ಕೆ 10 ಮಂದಿ ಮೃತಪಟ್ಟಿರುವ ಬಗ್ಗೆ ಮೈಸೂರಿನ ಟಿ.ನರಸೀಪುರ- ಕೊಳ್ಳೆಗಾಲ ಮುಖ್ಯರಸ್ತೆಯಲ್ಲಿಂದ ವರದಿಯಾಗಿದೆ.

ಖಾಸಗಿ ಬಸ್ ಮತ್ತು ಇನೋವಾ ಕಾರು ನಡುವೆ ಅಪಘಾತ ಸಂಭವಿಸಿದೆ.ಕುರುಬೂರು ಗ್ರಾಮದ ಪಿಂಜರ ಪೋಲ್ ಬಳಿ ಕೊಳ್ಳೇಗಾಲ – ಟಿ.ನರಸೀಪುರ ಮುಖ್ಯ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಮೃತಪಟ್ಟಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ. ಕಾರಿನಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಮಗು ಸೇರಿದಂತೆ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಬಸ್ ಡಿಕ್ಕಿ ರಭಸಕ್ಕೆ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಹಲವರಿಗೆ ಗಾಯಗಳಾಗಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Related posts

ಸಂಪಾಜೆ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ‌-ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಭೇಟಿ- ವಿಶೇಷ ಪೂಜೆ ಸಲ್ಲಿಕೆ

ಮಡಿಕೇರಿ : ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಬಿ.ಎನ್.ವೀಣಾ ಅಧಿಕಾರ ಸ್ವೀಕಾರ

ಪೆರಾಜೆ: ನದಿ ಕಿನಾರೆಯ ರಸ್ತೆ ಬಂದ್ ಮಾಡಿದ ಮುಸ್ಲಿಂ ಕುಟುಂಬ! ವಿಚಾರಿಸಲು ಬಂದ ಪೊಲೀಸರಿಂದ ಪ್ರಕರಣಕ್ಕೆ ಸಿಕ್ಕಿತು ರೋಚಕ ತಿರುವು!