ಜೀವನಶೈಲಿ

ಒಂಟಿಯಾಗಿರುವಾಗ ಹೆಣ್ಣು ಮಕ್ಕಳು ಗೂಗಲ್ ನಲ್ಲಿ ಏನು ಹುಡುಕುತ್ತಾರೆ ಗೊತ್ತಾ?ವರದಿಯಲ್ಲಿ ಬಹಿರಂಗ

ನ್ಯೂಸ್‌ ನಾಟೌಟ್‌ : ಮಹಿಳೆಯರು ಒಬ್ಬರೇ ಇದ್ದಾಗ ಮೊಬೈಲ್‌ನಲ್ಲಿ ಏನು ನೋಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಭಾರತದಲ್ಲಿ ಸುಮಾರು 60 ಮಿಲಿಯನ್ ಮಹಿಳೆಯರು ನಿತ್ಯವೂ ಆನ್‌ಲೈನ್‌ನಲ್ಲಿರುತ್ತಾರೆಯಂತೆ.ಇಲ್ಲಿ ಮಹಿಳೆಯರು ಕೂಡಾ ತಮ್ಮ ಮನಸ್ಸಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಇದೇ  ಗೂಗಲ್ ನಿಂದ ಅನ್ನೋದು ಅಚ್ಚರಿಯ ಸಂಗತಿ.  


ಹುಡುಗಿಯರು ವೃತ್ತಿಜೀವನದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ.ಹಾಗಾಗಿ ಹುಡುಗಿಯರು ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನೇ ಇಂಟರ್ ನೆಟ್ ನಲ್ಲಿ ಹುಡುಕುತ್ತಿರುತ್ತಾರೆ. ಯಾವ ವೃತ್ತಿ ಮಾಡಬೇಕು, ಯಾವ ಕೋರ್ಸ್ ಮಾಡಬೇಕು ಎನ್ನುವುದನ್ನು ಗೂಗಲ್ ಸರ್ಚ್ ಮಾಡುತ್ತಾರೆಯಂತೆ. ಇನ್ನು ಫ್ಯಾಶನ್ ಅಂದ್ರೆ ಮಹಿಳೆಯರಿಗೆ ತುಂಬಾ ಇಷ್ಟ.ಹುಡುಗಿಯರು ಆನ್‌ಲೈನ್ ಶಾಪಿಂಗ್ ಸೈಟ್‌ಗಳಿಗೆ ಹೆಚ್ಚು ಭೇಟಿ ನೀಡುವುದಲ್ಲದೇ ಬಟ್ಟೆ ವಿನ್ಯಾಸಗಳು, ಹೊಸ  ಕಲೆಕ್ಷನ್, ಆಫರ್ ಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಹೆಚ್ಚು ಸರ್ಚ್ ಮಾಡುತ್ತಿರುತ್ತಾರಂತೆ.

ಇನ್ನು ಇವರು ಎಲ್ಲರಿಗಿಂತ ಸುಂದರವಾಗಿ ಮತ್ತು ವಿಭಿನ್ನವಾಗಿ ಕಾಣುವುದಕ್ಕಾಗಿ ಇಂಟರ್‌ನೆಟ್ ಮೊರೆ ಹೋಗುತ್ತಾರೆ.ಫ್ಯಾಶನ್ , ಟ್ರೆಂಡಿಂಗ್, ಸೌಂದರ್ಯ ಚಿಕಿತ್ಸೆಗಳು ಮತ್ತು ಮನೆಮದ್ದುಗಳ ಬಗ್ಗೆ ಹೆಣ್ಣುಮಕ್ಕಳು ಆಗಾಗ ಸರ್ಚ್ ಮಾಡುತ್ತಿರುತ್ತಾರೆ. ಇನ್ನು ಹೊಸ ಹೊಸ ಮೆಹೆಂದಿ ಡಿಸೈನ್ ಗಳನ್ನೂ ಕೂಡಾ ಸರ್ಚ್ ಮಾಡುತ್ತಿರುತ್ತಾರೆ.ಹುಡುಗಿಯರು ಗೂಗಲ್ ನಲ್ಲಿ ಹೆಚ್ಚು ಹುಡುಕುವ ವಿಷಯಗಳಲ್ಲಿ ಸಂಗೀತವೂ ಒಂದು.ಹುಡುಗಿಯರು ರೊಮ್ಯಾಂಟಿಕ್ ಹಾಡುಗಳನ್ನು ಸರ್ಚ್ ಮಾಡುತ್ತಾರೆ. ಹಾಡು ಮಾತ್ರವಲ್ಲ ಕವನಗಳ ಹುಡುಕಾಟವೂ ಇಲ್ಲಿ ನಡೆಯುತ್ತದೆಯಂತೆ.   

Related posts

ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

Saregamapa Manjamma: ಅಕ್ಕ ರತ್ನಮ್ಮ ಜತೆ ಹಾಡುಹೇಳುತ್ತಿದ್ದ ತಂಗಿ ಮಂಜಮ್ಮ ಇನ್ನಿಲ್ಲ; ʼಸರಿಗಮಪʼ ವೇದಿಕೆಯಲ್ಲಿ ಪಾಲ್ಗೊಂಡು ಜನಪ್ರಿಯತೆ ಪಡೆದುಕೊಂಡಿದ್ದ ಅಂಧ ಗಾಯಕಿಯರು

ಮದುವೆ ಜೋಡಿಗೆ ಮಂತ್ರ ಪಠಣೆ ಬದಲು ಸಂವಿಧಾನ ಪ್ರತಿಜ್ಞೆ ಬೋಧನೆ: ವಿಡಿಯೋ ವೈರಲ್