ಕರಾವಳಿ

ಮಂಗಳೂರು: ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯರ ಜಡೆ ಜಗಳದಿಂದ ಇಡೀ ಶಾಲೆಯೇ ಖಾಲಿ..! 75 ವರ್ಷಗಳ ಇತಿಹಾಸವಿರುವ ಶಾಲೆಯಲ್ಲಿ ಇದೇನಿದು ಗಲಾಟೆ..?

ನ್ಯೂಸ್ ನಾಟೌಟ್: ಸರಕಾರಿ ಕನ್ನಡ ಶಾಲೆ ಅನ್ನುವುದು ಜ್ಞಾನ ದೇಗುಲ ಇದ್ದಂತೆ. ಅಂತಹ ದೇಗುಲದಲ್ಲಿ ಮಕ್ಕಳಿಗೆ ಪಾಠ ಮಾಡುವವರನ್ನು ದೇವರು ಎಂದು ಕರೆಯುತ್ತಾರೆ. ಆದರೆ ಇಲ್ಲೊಂದು ಶಾಲೆಯಲ್ಲಿ ಮೂವರು ಶಿಕ್ಷಕಿಯರ ಜಡೆ ಜಗಳದಿಂದ ಇಡೀ ಶಾಲೆಯ ಈಗ ಖಾಲಿಯಾಗಿರುವ ವಿಚಿತ್ರ ಘಟನೆ ವರದಿಯಾಗಿದೆ.

ದ.ಕ ಜಿಲ್ಲೆ ಬೆಳ್ತಂಗಡಿಯ ಸೋಣಂದಣೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು ಶಿಕ್ಷಕಿಯರ ಜಗಳದಿಂದ ಬೇಸತ್ತು ವಿದ್ಯಾರ್ಥಿಗಳನ್ನು ಬೇರೆಡೆ ಶಿಫ್ಟ್ ಮಾಡಲಾಗಿದೆ.

ಸುಮಾರು75 ವರ್ಷಗಳ ಇತಿಹಾಸವಿರುವ ಸೋಣಂದೂರು ಶಾಲೆಯಲ್ಲಿ ಸದ್ಯ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಕಲಿಗೆ ಅವಕಾಶ ಇದೆ. ಒಟ್ಟು 37 ಮಕ್ಕಳು ಇರುವ ಶಾಲೆಯಲ್ಲಿ ಮಕ್ಕಳ ಎದುರೇ ಟೀಚರ್‌ನವರು ಆವಾಗಾವಾಗ ಜಗಳವಾಡುತ್ತಿದ್ದರು ಎನ್ನಲಾಗಿದೆ. ಶಿಕ್ಷಕಿಯರ ಜಗಳದಿಂದ ಇದೀಗ ಬೇಸತ್ತ ವಿದ್ಯಾರ್ಥಿಗಳು ಶಾಲೆಯನ್ನೇ ಬಿಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೋಷಕರು ಮಕ್ಕಳನ್ನು ಇತರೆ ಶಾಲೆಗೆ ಕಳಿಸಿದ್ದಾರೆ ಎಂದು ತಿಳಿದು ಬಂದಿದೆ. ಶಿಕ್ಷಕಿಯರ ಜಗಳಕ್ಕೆ ಈ ಮೊದಲು ಇಬ್ಬರು ಶಿಕ್ಷಕರು ಶಾಲೆ ಬಿಟ್ಟಿದ್ದರು ಎನ್ನಲಾಗುತ್ತಿದೆ. ಸದ್ಯ ಶಾಲೆಯಲ್ಲಿ ಮಕ್ಕಳಿಲ್ಲದೆ ತರಗತಿಗಳೆಲ್ಲವೂ ಖಾಲಿಯಾಗಿದೆ.

Related posts

ಮಡಿಕೇರಿ: 549 ಕೆ.ಜಿ ತೂಕದ ಬೃಹತ್ ಕಾಡುಕೋಣವನ್ನು ಮಾಂಸ ಮಾಡಿದ ಕಿರಾತಕರು, ಅರಣ್ಯಧಿಕಾರಿಗಳ ದಾಳಿ ವೇಳೆ ಓರ್ವ ಪರಾರಿ, ಮತ್ತೋರ್ವ ಅರೆಸ್ಟ್

ಮೋದಿ ಆಗಮನಕ್ಕೂ ಮೊದಲು ಜಾಲತಾಣದಲ್ಲಿ ನಳಿನ್ ಬೇಡ ಅಭಿಯಾನ

ಮಾ.24ರಂದು ಸುಬ್ರಹ್ಮಣ್ಯಕ್ಕೆ ಸಿಎಂ ಬೊಮ್ಮಾಯಿ ಭೇಟಿ