ಕರಾವಳಿಕ್ರೀಡೆ/ಸಿನಿಮಾವೈರಲ್ ನ್ಯೂಸ್

ತಮಿಳು ಸಿನಿಮಾದಲ್ಲಿ ನಟಿಸಲಿರುವ ರೂಪೇಶ್ ಶೆಟ್ಟಿ, ಖ್ಯಾತ ನಟ ಯೋಗಿ ಬಾಬು ಜೊತೆ ಕನ್ನಡ ಬಿಗ್ ​ಬಾಸ್ ವಿನ್ನರ್

ನ್ಯೂಸ್ ನಾಟೌಟ್: ಬಿಗ್​​ಬಾಸ್ 9 ವಿನ್ನರ್ ರೂಪೇಶ್ ಶೆಟ್ಟಿ ಹೊಸ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದು, ಇದರಲ್ಲಿ ಅವರು ತಮಿಳಿನ ಖ್ಯಾತ ಹಾಸ್ಯನಟ ಯೋಗಿ ಬಾಬು ಜೊತೆಗೆ ಸಿನಿಮಾ ನಟಿಸುತ್ತಿರುವ ಬಗ್ಗೆ ಸುಳಿವು ನೀಡಿದ್ದಾರೆ.

ಅವರಿಬ್ಬರು ಜೊತೆಯಾಗಿರುವ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, “ಇಂದು ತುಂಬಾ ಖುಷಿಯ ದಿವಸ. ನಿಮ್ಮೆಲ್ಲರ ಆಶೀರ್ವಾದ ಹಾಗೂ ಪ್ರೋತ್ಸಾಹದಿಂದ ಇಂದು ಒಂದು ಅದ್ಭುತ ತಂಡದ ಜತೆಗೆ ಸನ್ನಿಧಾನಮ್ P. O ಎನ್ನುವ ನನ್ನ ಮೊದಲ ತಮಿಳು ಚಿತ್ರ ಮಾಡುವ ಅವಕಾಶ ದೊರಕಿದೆ. ತಮಿಳಿನ ಸೂಪರ್ ಸ್ಟಾರ್ ಹಾಸ್ಯ ನಟರಾದ ಯೋಗಿ ಬಾಬು ಅವರ ಜತೆ ನಟಿಸುವ ಅವಕಾಶ ನನ್ನ ಪಾಲಿಗೆ ದೊಡ್ಡ ಹೆಮ್ಮೆ. ನಿಮ್ಮ ಆಶೀರ್ವಾದ ಸದಾ ಇರಲಿ” ಎಂದು ನಟ ರೂಪೇಶ್ ಶೆಟ್ಟಿ ಬರೆದಿದ್ದಾರೆ.

ರೋಜಾ ಸಿನಿಮಾ ಖ್ಯಾತಿಯ ನಟಿ ಮಧು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದು, ಸಾರಥಿ ನಿರ್ದೇಶನ ಮಾಡಲಿದ್ದಾರೆ. ರೂಪೇಶ್ ಶೆಟ್ಟಿ ತುಳು ಹಾಗೂ ಕನ್ನಡ ಸಿನಿಮಾ ಮಾಡಿದ್ದರೂ ಕೂಡಾ ಇದೀಗ ತಮಿಳು ಚಿತ್ರರಂಗದಲ್ಲಿಯೂ ನಟಿಸೊದಕ್ಕೆ ಮುಂದಾಗಿದ್ದಾರೆ.

Related posts

ಹಾಡಹಗಲೇ ಯುವಕನ ಮೇಲೆ ಆ್ಯಸಿಡ್ ದಾಳಿ..! ಒಂದೇ ಠಾಣಾವ್ಯಾಪ್ತಿಯಲ್ಲಿ ಇದು 2ನೇ ಪ್ರಕರಣ..!

ಚಲಿಸುತ್ತಿದ್ದ ಸ್ಕೂಲ್‌ ವ್ಯಾನ್‌ನಿಂದ ಏಕಾಏಕಿ ಹೊರಗೆಸೆಯಲ್ಪಟ್ಟ ವಿದ್ಯಾರ್ಥಿನಿಯರು..!, ಅವಘಡದ ಸಿಸಿ ಕ್ಯಾಮೆರಾ ದೃಶ್ಯ ಇಲ್ಲಿದೆ ವೀಕ್ಷಿಸಿ

ಬಿಸಿಯೂಟದ ಅಕ್ಕಿಯಲ್ಲಿ ತೇಲಾಡುತ್ತಿರುವ ಪ್ಲಾಸ್ಟಿಕ್ ಮಿಶ್ರಿತ ಅಕ್ಕಿ, ಮಣಿಗಳಂತೆ ಕಾಣುವ ಈ ಅಕ್ಕಿಯ ಊಟ ತಿಂದರೆ ಮಕ್ಕಳ ಗತಿ ಏನು?