ಕರಾವಳಿ

ಉಳ್ಳಾಲದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ತಲ್ವಾರ್ ದಾಳಿ ಯತ್ನ

ನ್ಯೂಸ್ ನಾಟೌಟ್ : ಉಳ್ಳಾಲದಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆ ಯತ್ನ ನಡೆದಿದೆ. ತಲ್ವಾರು ದಾಳಿ ವಿಫಲವಾಗಿದೆ ಎಂದು ತಿಳಿದು ಬಂದಿದೆ.

ಕಿಶೋರ್ ಅನ್ನುವವರು ಹಂತಕರಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರದ ಯುವಕ. ಇವರು ಸದ್ಯ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಇದೀಗ ಹಂತಕರಿಗಾಗಿ ಶೋಧ ಆರಂಭವಾಗಿದೆ. ಕೆಲವು ದಿನಗಳ ಹಿಂದೆ ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆಯಿಂದ ಕರಾವಳಿ ಉದ್ವಿಗ್ನಗೊಂಡಿತ್ತು. ಇದಕ್ಕೂ ಮೊದಲು ಕಳಂಜದಲ್ಲಿ ಮಸೂದ್ ಎಂಬ ಯುವಕನ ಹತ್ಯೆ ನಡೆದಿತ್ತು. ಮಂಗಳೂರಲ್ಲಿ ಫಾಜಿಲ್ ಎಂಬ ಯುವಕನ ಹತ್ಯೆ ನಡೆದಿತ್ತು. ಇದೀಗ ಮಂಗಳೂರಿನಲ್ಲಿ ಮತ್ತೆ ನೆತ್ತರ ಬಯಸುವ ಕಿಡಿಗೇಡಿಗಳು ಲಾಂಗ್ ಹಿಡಿದು ಸಂಚರಿಸುತ್ತಿದ್ದು ಪೊಲೀಸರು ಇದೀಗ ಹಂತಕರ ಬೇಟೆಗೆ ಇಳಿದಿದ್ದಾರೆ.

Related posts

ಮಂಗಳೂರು: ಮಸೀದಿ ಮೇಲೆ ಕಲ್ಲು ತೂರಾಟ ಪ್ರಕರಣ: ಆರು ಮಂದಿ ಬಂಧನ..! 1 ಕಾರು, 2 ಬೈಕ್, 4 ಮೊಬೈಲ್ ಫೋನ್ ಪೊಲೀಸರ ವಶಕ್ಕೆ..!

350 ವರ್ಷಗಳ ಬಳಿಕ ಛತ್ರಪತಿ ಶಿವಾಜಿಯ ‘ಹುಲಿ ಉಗುರು’ ಮರಳಿ ಭಾರತಕ್ಕೆ..! ಈ ಬಗ್ಗೆ ಅಸಲಿ – ನಕಲಿ ಎಂಬ ಚರ್ಚೆಯಾಗುತ್ತಿರುವುದೇಕೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಸುಳ್ಯ: 7,000 ರೂ. ಮೌಲ್ಯದ ಸಿಗರೇಟ್, 10,000 ರೂ. ನಗದು ದೋಚಿ ಕತ್ತಲಲ್ಲಿ ಕಳ್ಳರು ಪರಾರಿ..! ರಾಷ್ಟ್ರೀಯ ಹೆದ್ದಾರಿ ಬದಿಯ ಅಂಗಡಿಗಳಿಗೆ ನುಗ್ಗಿ ಕಳ್ಳರ ಕೈ ಚಳಕ..!