ಕಾಬೂಲ್: ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿದ್ದರಿಂದ ಹೆದರಿದ ಸ್ಥಳೀಯರು ದೇಶ ತೊರೆಯಲು ಮುಂದಾಗಿದ್ದರು. ಈ ವೇಳೆ ಅಮೆರಿಕಾ ವಿಮಾನ ಟೇಕಾಫ್ ವೇಳೆ ಟೈರ್ ಮೇಲೆ ಹತ್ತಿ ಪಲಾಯನಕ್ಕೆ ಮುಂದಾಗಿದ್ದರು. ಆದರೆ ಆಗಸದ ಮಧ್ಯದಲ್ಲಿ ವಿಮಾನದಿಂದ ಇಬ್ಬರು ಕೆಳಗೆ ಬಿದ್ದು ಮೃತಪಟ್ಟಿದ್ದರು. ವಿಮಾನದಿಂದ ಕೆಳಗೆ ಬಿದ್ದು ಮೃತಪಟ್ಟವರ ಪೈಕಿ ಓರ್ವ ಫುಟ್ಬಾಲ್ ಆಟಗಾರ ಎಂದು ತಿಳಿದುಬಂದಿದೆ. ಹೌದು 19 ವರ್ಷದ ಝಾಕಿ ಅನ್ವಾರಿ ಆಟಗಾರ ದುರಂತ ಅಂತ್ಯ ಕಂಡಾತ. ಅನ್ವರಿ ಸಾವನ್ನು ಅಫ್ಘಾನಿಸ್ತಾನದ ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳ ಜನರಲ್ ಡೈರೆಕ್ಟರೇಟ್ ದೃಢಪಡಿಸಿದೆ. 16 ವರ್ಷದವನಿದ್ದಾಗಿನಿಂದ ಅನ್ವರಿ ಅಫ್ಘಾನ್ ರಾಷ್ಟ್ರೀಯ ಯುವ ತಂಡದಲ್ಲಿ ಆಡುತ್ತಿದ್ದು ಗೆಳೆಯರು ಮತ್ತು ತರಬೇತುದಾರರಿಗೆ ಅಚ್ಚುಮೆಚ್ಚಿನವನಾಗಿದ್ದನು.