ದೇಶ-ವಿದೇಶ

ತನಗೆ ತಾನೇ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ! ಪತ್ನಿಗಾಗಿ ಪ್ರೀತಿಯ ಉಡುಗೊರೆಯಂತೆ!!

ನ್ಯೂಸ್‌ ನಾಟೌಟ್‌ :ವೈದ್ಯರೊಬ್ಬರು ತಮ್ಮ ಹೆಂಡ್ತಿಯನ್ನು ಖುಷಿಡಿಸಲು ಸ್ವತಃ ತಮಗೆ ತಾವೇ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿಕೊಂಡಿರುವ ಘಟನೆಯೊಂದು ಸಿಕ್ಕಾ ಪಟ್ಟೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಹೌದು ಇದು ನನ್ನ ಹೆಂಡ್ತಿಗೆ ಪ್ರೀತಿಯ ಉಡುಗೊರೆ ಎನ್ನುತ್ತಾ ತಮಗೆ ತಾವೇ ಶಸ್ತ್ರಚಿಕಿತ್ಸೆ ಮಾಡಿದ್ದು,ಈ ವಿಡಿಯೋವನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಚೆನ್ ವೀ-ನಾಂಗ್ ಎಂಬ ತೈವಾನ್‌ನ ಪ್ಲಾಸ್ಟಿಕ್ ಸರ್ಜನ್ ತಮಗೆ ತಾವೇ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾರೆ. ಅವರಿಗೆ ಈಗಾಗಲೇ ಮೂರು ಮಕ್ಕಳಿದ್ದು, ಮತ್ತು ಪತ್ನಿಗೆ ಇನ್ನೂ ಹೆಚ್ಚಿನ ಮಕ್ಕಳನ್ನು ಹೊಂದುವುದು ಇಷ್ಟವಿರಲಿಲ್ಲ. ಆದ ಕಾರಣ ಹೆಂಡತಿಯನ್ನು ಖುಷಿಪಡಿಸಲು ಹಾಗೂ ಆಕೆಗೆ ಪ್ರೀತಿಯ ಉಡುಗೊರೆಯಾಗಿ ವೈದ್ಯ ಚೆನ್‌ ವೀ-ನಾಂಗ್‌ ತಮಗೆ ತಾವೇ ಶಸ್ತ್ರಚಿಕಿತ್ಸೆಯನ್ನು ಮಾಡಿಕೊಂಡಿದ್ದಾರೆ. ಈ ಆಪರೇಷನ್‌ಗೆ ಸಂಬಂಧಪಟ್ಟ ಸಂಪೂರ್ಣ ದೃಶ್ಯವನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಜೊತೆಗೆ ಅವರು ಈ ವಿಡಿಯೋವನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಹಾಗೂ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಮಾಡಿದ್ದು ಎಂದು ಹೇಳಿಕೊಂಡಿದ್ದಾರೆ.

docchen3 ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ವೈದ್ಯ ಚೆನ್ ವೀ-ನಾಂಗ್ ತಮ್ಮ ವೈದ್ಯಕೀಯ ಸಿಬ್ಬಂದಿಗಳ ಸಹಾಯದೊಂದಿಗೆ ತಮಗೆ ತಾವೇ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.

Related posts

6 ವರ್ಷದ ಮಗುವನ್ನು ಮೊಸಳೆಗಳಿದ್ದ ನಾಲೆಗೆ ಎಸೆದ ತಾಯಿ..! ಗಂಡನೊಂದಿಗೆ ಗಲಾಟೆ

ಅಟಲ್‌ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ..! ಮಹಿಳೆ ಬಚಾವ್‌ ಆಗಿದ್ದು ಹೇಗೆ..? ವಿಡಿಯೋ ವೀಕ್ಷಿಸಿ..

ತಲೆಯಿಂದ ಗುದ್ದಿ ಹಡಗನ್ನೇ ಮುಳುಗಿಸಿದ ತಿಮಿಂಗಿಲ..! ಇಲ್ಲಿದೆ ಭಯಾನಕ ವಿಡಿಯೋ..!