ಕ್ರೈಂರಾಜ್ಯವೈರಲ್ ನ್ಯೂಸ್

ಈಜು ಕಲಿಯಲು ಹೋಗಿದ್ದ 10 ರ ಬಾಲಕ ಹಳ್ಳದಲ್ಲಿ ಮುಳುಗಿ ಸಾವು..! ಕುಟುಂಬಸ್ಥರ ಮುಂದೆಯೇ ದುರಂತ..!

ನ್ಯೂಸ್ ನಾಟೌಟ್: ಈಜು ಕಲಿಯಲು ಹೋಗಿದ್ದ ಬಾಲಕ ಅನಿರೀಕ್ಷಿತವಾಗಿ ನೀರುಪಾಲಾದ ಘಟನೆ ರಾಯಚೂರು ತಾಲೂಕಿನ ಹೆಂಬೆರಾಳ ಗ್ರಾಮದಲ್ಲಿ ವರದಿಯಾಗಿದೆ. ಸ್ಥಳೀಯರು ಹಳ್ಳದಲ್ಲಿ ವಿನಾಯಕನ ಮೃತದೇಹವನ್ನು ಪತ್ತೆಹಚ್ಚಿ ಹೊರ ತೆಗೆದಿದ್ದಾರೆ.

ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜೇಗರ್‌ಕಲ್ ಮಲ್ಲಾಪೂರು ಗ್ರಾಮದ ವಿನಾಯಕ (10) ಮೃತ ಬಾಲಕ ಎಂದು ಗುರುತಿಸಲಾಗಿದೆ. ಮೃತ ಬಾಲಕ ಮಂಗಳವಾರ(ಮೇ.೭) ಕುಟುಂಬಸ್ಥರೊಂದಿಗೆ ಈಜು ಕಲಿಯಲು ಪಕ್ಕದೂರು ಹೆಂಬೆರಾಳದ ಹಳ್ಳಕ್ಕೆ ಹೋಗಿದ್ದ. ನೀರಿನ ಆಳ ಹೆಚ್ಚಿದ್ದ ಕಡೆ ವಿನಾಯಕ ಈಜಲು ತೆರಳಿದ್ದ ಎನ್ನಲಾಗಿದೆ. ಈಜು ಬಾರದ ಹಿನ್ನೆಲೆ ನೀರುಪಾಲಾಗಿದ್ದಾನೆ ಎಂದು ಶಂಕಿಸಲಾಗಿದೆ.

Related posts

ಕೊಳೆಗೇರಿಗಳಿಗೆ ಬಿಲ್ ಗೇಟ್ಸ್ ಭೇಟಿ ನೀಡಿದ್ದೇಕೆ..? ಸರ್ಕಾರಿ ಅಧಿಕಾರಿಯನ್ನು ಕರೆದೊಯ್ದ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ..!

NMC ಸಮಾಜ ಕಾರ್ಯ (BSW) ವತಿಯಿಂದ ಸ್ವಾವಲಂಬನೆಯೆಡೆಗೆ ಒಂದು ಹೆಜ್ಜೆ, ಹಲವಾರು ಮಂದಿಗೆ ಸ್ವ ಉದ್ಯೋಗದ ಪ್ರೇರಣೆ

ಕರ್ನಾಟಕದ ಬಡ ವೆಲ್ಡರ್ ಕಾರ್ಮಿಕನ ಮಗ ಕೌನ್ ಬನೇಗಾ ಕರೋಡ್ ​ಪತಿಯಲ್ಲಿ 50 ಲಕ್ಷ ಗೆದ್ದ, ಬಾಗಲಕೋಟೆಯ ಬಡ ಯುವಕ ಸಾಧನೆ