ಕರಾವಳಿ

ಕೊರಗಜ್ಜ ಹೆಸರಿನ ವ್ಯಕ್ತಿಯ ಕೂರಿಸಿಕೊಂಡು ಬಂದ ರಿಕ್ಷಾ ಪಲ್ಟಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಜ್ಜನನ್ನು ಬಿಟ್ಟು ಹೋದವನಿಗೆ ಆಗಿದ್ದೇನು ಗೊತ್ತಾ?

ನ್ಯೂಸ್ ನಾಟೌಟ್ : ತುಳುನಾಡಿನ ಪವರ್ ಫುಲ್ ದೈವ ಸ್ವಾಮಿ ಕೊರಗಜ್ಜ. ನಂಬಿದ ಭಕ್ತರು ಏನು ಕೇಳಿದರೂ ಅಜ್ಜ ಕೊಟ್ಟೇ ಕೊಡುತ್ತಾರೆ ಅನ್ನುವ ನಂಬಿಕೆಯಿದೆ. ಅಂತಹ ದೈವದ ಕಾರ್ಣಿಕದ ಶಕ್ತಿಯನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ. ಅಜ್ಜನ ಒಂದೊಂದು ಪವಾಡದ ಸುದ್ದಿಗಳು ಇತ್ತೀಚೆಗೆ ವೈರಲ್ ಆಗುತ್ತಿದೆ. ಈ ಬೆನ್ನಲ್ಲೇ ಇದೀಗ ಸುಳ್ಯ ತಾಲೂಕಿನ ಕಲ್ಲುಗುಂಡಿ ಸಮೀಪದ ಕಡೆಪಾಲದಲ್ಲೂ ಅಜ್ಜನ ಪವಾಡ ಎಂದೇ ಹೇಳಬಹುದಾದ ಘಟನೆ ನಡೆದಿದೆ.

ಸುಳ್ಯದ ಕಲ್ಲುಗುಂಡಿ ಸಮೀಪದ ಕಡೆಪಾಲದಲ್ಲಿ ತಡರಾತ್ರಿ ರಿಕ್ಷಾವೊಂದು ಪಲ್ಟಿ ಹೊಡೆದಿದೆ. ವಯಸ್ಸಾದ ಪ್ರಯಾಣಿಕನೋರ್ವ ತೀವ್ರ ಗಾಯಗೊಂಡಿದ್ದಾರೆ. ಆದರೆ ರಿಕ್ಷಾ ಚಾಲಕ ಮಾನವೀಯತೆಯನ್ನು ಮರೆತು ರಿಕ್ಷಾವನ್ನು ಮತ್ತೆ ಎತ್ತಿ ನಿಲ್ಲಿಸಿಕೊಂಡು ವೃದ್ಧ  ಗಾಯಾಳುವನ್ನು ಅಲ್ಲೇ ಬಿಟ್ಟು ರಿಕ್ಷಾದೊಂದಿಗೆ ಪರಾರಿಯಾಗಿದ್ದಾನೆ. ಆದರೆ ರಿಕ್ಷಾ ಪೆರಾಜೆ ಬಳಿ ತಲುಪುತ್ತಿದ್ದಂತೆ ಮತ್ತೆ ಪಲ್ಟಿ ಹೊಡೆದಿರುವುದು ವಿಚಿತ್ರ ಎನಿಸಿಕೊಂಡಿದೆ.

ಗಾಯಾಳು ಹೆಸರು ಕೊರಗಜ್ಜ ಎಂದು. ಅವರು ಮರ್ಕಂಜ ಮೂಲದವರು.ಮಧ್ಯರಾತ್ರಿಯಲ್ಲಿ ರಿಕ್ಷಾದಲ್ಲಿ ಅವರು ಮರ್ಕಂಜಕ್ಕೆ ಪ್ರಯಾಣಿಸುತ್ತಿದ್ದರು ಎನ್ನಲಾಗುತ್ತಿದೆ. ಗಾಯಾಳು ರಕ್ತದ ಮಡುವಿನಲ್ಲಿ ಸ್ಥಳೀಯರ ಸಹಾಯ ಕೇಳಿದ್ದಾರೆ.ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಅವರನ್ನು ಆಂಬ್ಯುಲೆನ್ಸ್ ಮೂಲಕ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಲ್ಲುಗುಂಡಿ ಹೊರಠಾಣೆಯ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

ಘಟನೆ ನಡೆದ ಅಣತಿ ದೂರದಲ್ಲಿ ಕಡೆಪಾಲ ಶ್ರೀ ಕೊರಗಜ್ಜ ಹಾಗೂ ಅರ್ಧ ಕಿ.ಮೀ. ವ್ಯಾಪ್ತಿಯಲ್ಲಿ ಪವಾಡ ಕ್ಷೇತ್ರ ದೊಡ್ಡಡ್ಕ ಶ್ರೀ ಕೊರಗಜ್ಜ ನೆಲೆಯಾಗಿದ್ದು ತಡರಾತ್ರಿ ‘ಕೊರಗಜ್ಜ’ ಎಂಬ ಹೆಸರಿನ ವೃದ್ಧನ ರಕ್ಷಣೆಯನ್ನು ಸ್ಥಳ ಸಾನಿಧ್ಯ ಶಕ್ತಿಗಳೇ ರಕ್ಷಿಸಿದ್ದಾರೆ ಎಂದು ಸ್ಥಳೀಯರು ಈಗ ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಇಲ್ಲಿ ಪಲ್ಟಿ ಹೊಡೆದ ರಿಕ್ಷಾ ಮತ್ತೊಂದು ಕಡೆಯಲ್ಲೂ ಪಲ್ಟಿಯಾಗುವುದಕ್ಕೆ ಹೇಗೆ ಸಾಧ್ಯ? ಅಜ್ಜನನ್ನು ನಡು ರಸ್ತೆಯಲ್ಲಿ ಬಿಟ್ಟು ಹೋದವನಿಗೆ ತಕ್ಕ ಶಾಸ್ತಿಯಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.  

Related posts

ಸುಳ್ಯ: ಗಣೇಶೋತ್ಸವ ಕಾರ್ಯಕ್ರಮದ ವೇಳೆ ಕುಡುಕನ ಅವಾಂತರ..! ಕಂಠ ಪೂರ್ತಿ ಮದ್ಯ ಸೇವಿಸಿ ಸಂಘಟಕರ ಎದುರಲ್ಲೇ ಬಿದ್ದು ಹೊರಳಾಡಿದ ಭೂಪ..!

ಸಮುದ್ರದಲ್ಲಿ ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ, 3 ಸಿಬ್ಬಂದಿ ನಿಗೂಢ ನಾಪತ್ತೆ..! ನಾಲ್ಕು ಹಡಗುಗಳು ಮತ್ತು ಎರಡು ವಿಮಾನಗಳ ಮೂಲಕ ಹುಡುಕಾಟ..!

ಪುತ್ತೂರು: ಗ್ರಾಹಕರ ಸೋಗಿನಲ್ಲಿ ಬಂದು 2.60 ಲಕ್ಷ ರೂ. ಮೌಲ್ಯದ ಚಿನ್ನ ದೋಚಿದ ಐನಾತಿ ಕಳ್ಳಿಯರು ಅರೆಸ್ಟ್