ಸುಳ್ಯ

ಸುಳ್ಯ: ಸುಳ್ಯದ ಕೆವಿಜಿ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನಕ್ಕೆ ಚಾಲನೆ

ನ್ಯೂಸ್‌ ನಾಟೌಟ್‌: ಸುಳ್ಯದ ಕೆವಿಜಿ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ವಚ್ಛತಾ ಹಿ ಸೇವಾ ಉಪಕ್ರಮದ ಭಾಗವಾಗಿ ಸೋಮವಾರ (ಸೆ.23 ) ಮಧ್ಯಾಹ್ನ ಸ್ವಚ್ಛತಾ ಅಭಿಯಾನ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಕೆವಿಜಿ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ಡೀನ್‌ ಡಾ| ನೀಲಾಂಬಿಕೈ ನಟರಾಜನ್ ಚಾಲನೆ ನೀಡಿದರು. ಫಾರ್ಮಕಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಸವಿನ್ ಸಿಜಿ, ಕಾಲೇಜಿನ ಎನ್‌ಎಸ್‌ ಎಸ್‌ ಘಟಕದ ಪದಾಧಿಕಾರಿಗಳು, ಆಸ್ಪತ್ರೆಯ ವೈದ್ಯ ವಿದ್ಯಾರ್ಥಿಗಳು, ಎಲ್ಲಾ ವಿಭಾಗಗಳ ಸಿಬ್ಬಂದಿ ಪಾಲ್ಗೊಂಡಿದ್ದರು.

ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ನಿರ್ದೇಶನದಂತೆ, ಸ್ವಚ್ಛತಾ ಹಿ ಸೇವಾ ಅಭಿಯಾನವನ್ನು ಸೆಪ್ಟೆಂಬರ್ 17ರಿಂದ ಅಕ್ಟೋಬರ್ 1ರವರೆಗೆ ಆಚರಿಸಲಾಗುತ್ತದೆ. ಬಳಿಕ ಅಕ್ಟೋಬರ್ 2 ರಂದು ಸ್ವಚ್ಛ ಭಾರತ್ ದಿವಸ್ ಆಚರಿಸಲಾಗುತ್ತದೆ.

Related posts

ಸುಳ್ಯ: ವೇಗವಾಗಿ ಬಂದ ಇನ್ನೋವಾ ಪಲ್ಟಿ, ಸ್ಥಳದಲ್ಲಿ ಜನ ಜಮಾವಣೆ

ಸುಳ್ಯ: ಅಪಘಾತದಲ್ಲಿ ಗಾಯಗೊಂಡಿದ್ದ ಅನಾಥ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನೆ, ತುರ್ತು ಸಂದರ್ಭದಲ್ಲಿ ಮಾನವೀಯ ಸಹಾಯ

ಸುಳ್ಯ:ಮೈರೋಳ್ ಹಣ್ಣಿನ ಜ್ಯೂಸ್ ತಯಾರಿಸಿ ಸೇವಿಸಿದ ಮಹಿಳೆ ದುರಂತ ಅಂತ್ಯ,ಏನಿದು ಘಟನೆ?