ಕರಾವಳಿ

“ಕಾರ್ಕಳದಲ್ಲಿ ಕಣಕ್ಕೆ ಇಳಿದಿರುವ ಮುತಾಲಿಕ್ ಸ್ಪರ್ಧೆಯನ್ನು ಸ್ವಾಗತಿಸುತ್ತೇನೆ’

ನ್ಯೂಸ್ ನಾಟೌಟ್: ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ಚುನಾವಣೆಗೆ ಇಳಿದಿರುವುದನ್ನು ಸ್ವಾಗತಿಸುತ್ತೇನೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.


ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ನನ್ನ ಸ್ಥಳದಲ್ಲಿ ಪ್ರಮೋದ್ ಮುತಾಲಿಕ್ ಸ್ಪರ್ಧೆಯನ್ನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಸ್ಪರ್ಧೆಗಳು ಇರಬೇಕು. ಅಂತಿಮವಾಗಿ ಮತದಾರರು ನಿರ್ಣಯ ಮಾಡುತ್ತಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲರೂ ಸ್ವತಂತ್ರರು. ನಮ್ಮ ಪಕ್ಷದ ನಿಲುವು ಹೇಗಿರಬೇಕು ಅನ್ನುವುದನ್ನು ಬೇರೆಯವರು ಹೇಳಬೇಕಾದ ಅಗತ್ಯ ಇಲ್ಲ ಎಂದು ತಿಳಿಸಿದರು. ಪ್ರಸ್ತುತ ಇಂಧನ ಸಚಿವರಾಗಿರುವ ಸುನಿಲ್ ಕುಮಾರ್ ಅವರ ಕ್ಷೇತ್ರದಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ಪರ್ಧಿಸುವುದರಿಂದ ಚುನಾವಣಾ ಕಣ ಸಾಕಷ್ಟು ಕುತೂಹಲ ಕೆರಳಿಸಿದೆ. ಮುತಾಲಿಕ್ ಹಿಂದುತ್ವಕ್ಕಾಗಿ ಕಣಕ್ಕೆ ಇಳಿಯುತ್ತೇನೆ ಎಂದು ಹೇಳಿರುವುದರಿಂದ ಎಲ್ಲರು ಕುತೂಹಲ ನೆಟ್ಟಿದ್ದಾರೆ.

Related posts

ತಡರಾತ್ರಿ ಸುಳ್ಯದಲ್ಲಿ ಮಡಿಕೇರಿ ಮೂಲದ ವ್ಯಕ್ತಿಯ 3.5 ಲಕ್ಷ ರೂ. ದರೋಡೆ..! ಆಟೋ ರಿಕ್ಷಾ ಏರಿದವನಿಗೆ ಆಪತ್ತು ಎದುರಾಗಿದ್ದು ಹೇಗೆ..?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಲ್ಲ ಫುಡ್ ಟೆಸ್ಟ್ ಲ್ಯಾಬ್ !

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ, ಯತಿಕಾರ್ಪ್ ಇಂಡಿಯಾ ಐಟಿ ಕಂಪನಿಯಲ್ಲಿ ಪದವೀಧರರಿಗೆ ಉದ್ಯೋಗ ಅವಕಾಶ, ಉತ್ತಮ ವೇತನದೊಂದಿಗೆ ಪ್ರತೀ ತಾಲೂಕಿಗೆ ಎಐ ಪ್ರಾದೇಶಿಕ ಪ್ರತಿನಿಧಿಗಳ ಆಯ್ಕೆ