ಕರಾವಳಿಸುಳ್ಯ

ಸುಳ್ಯ:ಅನಾರೋಗ್ಯಕ್ಕೆ ತುತ್ತಾಗಿ ಮೂರು ವರ್ಷದ ಕಂದಮ್ಮ ನಿಧನ

ನ್ಯೂಸ್ ನಾಟೌಟ್ : ಸುಳ್ಯದ ಪುಟ್ಟ ಕಂದಮ್ಮ ಹಲವು ತಿಂಗಳಿನಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿತ್ತು.ಬೋನ್‌ಮ್ಯಾರೋ ಖಾಯಿಲೆಗೆ ತುತ್ತಾಗಿದ್ದ ಈ ಪುಟ್ಟ ಬಾಲಕಿಗೆ ಇಡೀ ನಾಡಿನ ಜನತೆಯ ಮನಮಿಡಿಯಿತು. ಅಭಯಹಸ್ತವನ್ನೂ ಚಾಚಿತು.ಶಸ್ತ್ರ ಚಿಕಿತ್ಸೆ ಬಳಿಕ ಆರೋಗ್ಯದಿಂದಿದ್ದ ಮಗುವಿಗೆ ಇದ್ದಕ್ಕಿದ್ದ ಹಾಗೆ ಆರೋಗ್ಯ ಹದಗೆಟ್ಟಿದ್ದು,ಆಸ್ಪತ್ರೆಯಲ್ಲಿ ಅಸುನೀಗಿದೆ.

ಮೃತಪಟ್ಟ ಕಂದಮ್ಮನನ್ನು ಸುಳ್ಯದ ಬೋರುಗುಡ್ಡೆ ನಿವಾಸಿ ಮುನಾಫರ್ ಶಾ ಮಗಳು ಆಯಿಷಾ ಮಿಝಾ(3) ಎಂದು ಗುರುತಿಸಲಾಗಿದೆ.ಬೆಂಗಳೂರಿನಲ್ಲಿ ಶಸ್ತ್ರ ಚಿಕಿತ್ಸೆಗೊಳಗಾದ ಬಳಿಕ ಈಕೆ ಚೇತರಿಸಿಕೊಂಡಿದ್ದಳು.ಆದರೆ ವಿಧಿ ಲೀಲೆ ಎನ್ನುವಂತೆ ಇದ್ದಕ್ಕಿದ್ದ ಹಾಗೆ ಆಕೆಗೆ ಮತ್ತೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.ಈಕೆಯ ನಿಧನ ವಾರ್ತೆ ಕೇಳಿ ಹೆತ್ತವರ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Related posts

ಮೂಡುಬಿದಿರೆ: ವಿದ್ಯಾರ್ಥಿನಿ ನಿಗೂಢ ನಾಪತ್ತೆ..! ಕಾಲೇಜು ಬಸ್ ನಲ್ಲಿ ಬಂದ 19 ರ ಯುವತಿ ಹೋದದ್ದೆಲ್ಲಿಗೆ..?

ಮಂಗಳೂರು: ಡಿಸಿ ಕಚೇರಿ ಮೆಟ್ಟಿಲಲ್ಲಿ ಧರಣಿ ಕುಳಿತ ಬಿಜೆಪಿ ಶಾಸಕರು..! ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಧ್ಯ ಪ್ರವೇಶ

ವ್ಯಕ್ತಿಗಳಿಂದ ಹಣ ಸ್ವೀಕರಿಸಿ ಪತ್ನಿಗೆ ಬೆತ್ತಲೆ ವಿಡಿಯೋ ಕಾಲ್ ಮಾಡುವಂತೆ ಗಂಡನ ಒತ್ತಾಯದ ಆರೋಪ ,ಪಾಪಿ ಪತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ