ಕರಾವಳಿಸುಳ್ಯ

ಸುಳ್ಯ:ವಿದ್ಯಾರ್ಥಿಗಳ ಪ್ರವಾಸಕ್ಕೆಂದು ಇರಿಸಿದ್ದ ನಗದನ್ನೇ ದೋಚಿದ ಖದೀಮರು..!,ಶಾಲೆಯ ಬೀಗ ಮುರಿದು ಒಳಪ್ರವೇಶಿಸಿ ಕೃತ್ಯ

ನ್ಯೂಸ್ ನಾಟೌಟ್:ಪ್ರವಾಸ ಹೋಗಬೇಕೆನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸಾಗಿರುತ್ತದೆ.ಶಾಲಾ ಅವಧಿಯಲ್ಲಿ ಹೊಸ ಹೊಸ ಸ್ಥಳಗಳ ಪರಿಚಯ ಮಾಡಿಕೊಳ್ಳೋದರ ಜತೆಗೆ ವರ್ಷಕ್ಕೊಮ್ಮೆ ಇಂತಹ ಅಪೂರ್ವ ಕ್ಷಣವನ್ನು ಯಾರೂ ಮಿಸ್ ಮಾಡಿಕೊಳ್ಳಲು ರೆಡಿ ಇರೋದಿಲ್ಲ..ಹೀಗೆ ಪ್ರವಾಸಕ್ಕೆಂದು ತೆರಳಲು ಇರಿಸಿದ್ದ ಹಣವನ್ನೇ ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ಸುಳ್ಯ ತಾಲೂಕಿನ ಐವರ್ನಾಡಿನಿಂದ ವರದಿಯಾಗಿದೆ.

ಬೆಳ್ಳಾರೆ ಠಾಣಾ ವ್ಯಾಪ್ತಿಯ ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಡಿ.7ರಂದು ರಾತ್ರಿ ವೇಳೆ ನಡೆದಿದೆ.ಬೀಗ ಮುರಿದು ಶಾಲೆಯ ಒಳಪ್ರವೇಶಿಸಿದ ಕಳ್ಳರು ನಗದು ಕಳವುಗೈದಿರುವುದಾಗಿ ತಿಳಿದು ಬಂದಿದೆ.ಬೆಳ್ಳಾರೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

Related posts

ಇಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜಿಗೆ ರಜೆ ಘೋಷಣೆ

ನಾಲ್ವರು ಸಿಬ್ಬಂದಿಗೆ ಕರೋನಾ, ಸುಳ್ಯ ನ್ಯಾಯಾಲಯದಲ್ಲಿ ಕಟ್ಟೆಚ್ಚರ

ಸುಳ್ಯ: ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, ಎಎಪಿ ಅಭ್ಯರ್ಥಿಗಳಿಂದ ಮತದಾನ