ಕರಾವಳಿಸುಳ್ಯ

ಸುಳ್ಯ:ವ್ಯಕ್ತಿಯೊಬ್ಬರ ಶವ ಕೆರೆಯಲ್ಲಿ ಪತ್ತೆ,ಆಕಸ್ಮಿಕವಾಗಿ ಕಾಲು ಜಾರಿ ಮೃತಪಟ್ಟಿರುವ ಶಂಕೆ

ನ್ಯೂಸ್ ನಾಟೌಟ್ : ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕೆರೆಗೆ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಸುಳ್ಯ ತಾಲೂಕಿನ ಮೇನಾಲದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ೫೧ ವರ್ಷ ಪ್ರಾಯದ ಅಬ್ದುಲ್ಲ ಎಂದು ಗುರುತಿಸಲಾಗಿದೆ.

ಘಟನೆ ನಡೆದದ್ದು ಹೇಗೆ?

ನಿನ್ನೆ ಸಂಜೆ ವೇಳೆ ಅಬ್ದುಲ್ಲ ಎಂಬವರು ಕೆಲಸ ಮಾಡಲೆಂದು ತೋಟಕ್ಕೆ ತೆರಳಿದ್ದರು ಎನ್ನಲಾಗಿದೆ.ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ರಾತ್ರಿಯಾದರೂ ಮನೆಗೆ ಬಾರದೇ ಇರುವುದನ್ನು ಗಮನಿಸಿದ ಮನೆಯವರು ಅವರನ್ನು ಹುಡುಕಲು ಆರಂಭಿಸಿದ್ದಾರೆ.ತೋಟದೊಳಗೆ ಹುಡುಕಾಡಿದಾಗ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ ಎನ್ನಲಾಗಿದೆ.ಕೆರೆಯ ಬಳಿಯಲ್ಲಿ ಅವರು ತೋಟದ ಕೆಲಸಕ್ಕೆಂದು ಬಳಸಿದ್ದ ಕತ್ತಿ ಸೇರಿದಂತೆ ಇನ್ನಿತರ ಸಾಮಾಗ್ರಿಗಳು ಬಿದ್ದಿದ್ದವು.ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Related posts

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಉಪನ್ಯಾಸ ಕಾರ್ಯಕ್ರಮಕ್ಕೆ ABVP ನೇತೃತ್ವದಲ್ಲಿ ಸಂಘ ಪರಿವಾರದಿಂದ ತೀವ್ರ ವಿರೋಧ, ಪ್ರೊಫೆಸರ್ ಡಾ ಶಂಸುಲ್ ಇಸ್ಲಾಂ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ, ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಘರ್ಷಣೆ

ಭಾರಿ ಭೂಕಂಪ ಆಗುವುದು: ಕೋಡಿಮಠದ ಸ್ವಾಮೀಜಿ ಭವಿಷ್ಯ

ದೊಡ್ಡಡ್ಕ: ರಾಜ್ಯ, ಹೊರರಾಜ್ಯದಿಂದಲೂ ಚನಿಯಪ್ಪಣ್ಣನ ಕಷ್ಟಕ್ಕೆ ಸ್ಪಂದಿಸಿದ “ನ್ಯೂಸ್ ನಾಟೌಟ್” ವೀಕ್ಷಕರು..!, ಹರಿದು ಬಂದ ಸಹಾಯ ಹಸ್ತದ ಕೈಗಳು, ಧನ್ಯವಾದ ವೀಕ್ಷಕ ಬಂಧುಗಳೇ