ದಕ್ಷಿಣ ಕನ್ನಡಸುಳ್ಯ

ಸುಳ್ಯ: ‘ಜನರು ಭಾವನಾತ್ಮಕ ವಿಚಾರಕ್ಕೆ ಮತ ನೀಡಿದ್ರು, ಕಾಂಗ್ರೆಸ್ ಉತ್ತಮ ಹೋರಾಟ ನೀಡಿದೆ’, ಪಿ.ಸಿ ಜಯರಾಮ್ ಮಾತು

ನ್ಯೂಸ್ ನಾಟೌಟ್: ಲೋಕ ಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋತಿರಬಹುದು, ಆದರೆ ಉತ್ತಮ ಪೈಪೋಟಿಯನ್ನು ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ತಿಳಿಸಿದ್ದಾರೆ.

ಶನಿವಾರ ಸುಳ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೆಲ್ಲಲು ಸಾಧ್ಯವಾಗದೆ ಇರಬಹುದು. ಆದರೆ ಈ ಸಲ ಉತ್ತಮ ಪೈಪೋಟಿ ನೀಡಿದೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಸಿಗಲಿಲ್ಲ. ಸೋಲು ಎಲ್ಲಿ ಆಗಿದೆ ಅನ್ನುವುದರ ಬಗ್ಗೆ ವಿಮರ್ಶೆ ಮಾಡುತ್ತೇವೆ. ಪ್ರತಿ ಗ್ರಾಮಕ್ಕೆ ತೆರಳಿ ಪರಾಮರ್ಶೆ ಮಾಡುತ್ತೇವೆ. ಪದ್ಮರಾಜ್ ಒಳ್ಳೆಯ ಅಭ್ಯರ್ಥಿಯಾಗಿದ್ದರು. ಅವರನ್ನು ಗೆಲ್ಲಿಸಬಹುದಿತ್ತು. ಆದರೆ ಜನರು ಭಾವನಾತ್ಮಕ ವಿಚಾರಕ್ಕೆ ಮತ ನೀಡಿದ್ದರಿಂದ ಸೋಲಾಯಿತು” ಎಂದು ತಿಳಿಸಿದರು.

ದೇ ವೇಳೆ ಡಿಸಿಸಿ ಉಪಾಧ್ಯಕ್ಷ ಎನ್ . ಜಯಪ್ರಕಾಶ್ ರೈ ಮಾತನಾಡಿ, “ಈ ಬಾರಿಯ ಚುನಾವಣೆಯಲ್ಲಿ ಪ್ರಜಾತಂತ್ರ ಗೆದ್ದಿದೆ. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿಯೇ ನಮ್ಮ ವಿರೋಧ ಪಕ್ಷದ ನಾಯಕರಾಗಲಿದ್ದಾರೆ ಅನ್ನುವ ವಿಶ್ವಾಸವಿದೆ. ಮುಂದಿನ ಸಲ ಖಂಡಿತವಾಗಿಯೂ ಅವರು ಪ್ರಧಾನಿ ಆಗಿಯೇ ಆಗ್ತಾರೆ. ಈ ಸಲ ರಾಮನ ಆಶೀರ್ವಾದ ಸಂಪೂರ್ಣವಾಗಿ ಕಾಂಗ್ರೆಸ್ ನೇತೃತ್ವದ ಇಂಡಿಯಾಕ್ಕೆ ಸಿಕ್ಕಿದೆ. ನಮ್ಮ ಪಕ್ಷದ ಸೋಲಿನ ಬಗ್ಗೆ ಗಂಭೀರವಾದ ಪರಾಮರ್ಶೆ ನಡೆಯಲಿದೆ” ಎಂದು ಖುಷಿ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್ ಗಂಗಾಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ, ಭವಾನಿ ಶಂಕರ ಕಲ್ಮಡ್ಕ, ನಂದರಾಜ್ ಸಂಕೇಶ, ಮುತ್ತಪ್ಪ ಪೂಜಾರಿ, ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು.

Related posts

ಸುಳ್ಯ: ಅನಾಥ ಕಾರಿನ ಬಗ್ಗೆ ಹಬ್ಬಿದ ಊಹಾಪೋಹಗಳೇನು? ಕೊನೆಗೂ ಘಟನೆಗೆ ತೆರೆಬಿದ್ದದ್ದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಸುಳ್ಯ:ಡಾ.ಕೆ.ವಿ.ಜಿಯವರ 95ನೇ ಹುಟ್ಟು ಹಬ್ಬದ ಸ್ಮರಣಾರ್ಥ ಹಾನಿಗೀಡಾದ ಮನೆಗೆ ಹಣ ಹಸ್ತಾಂತರ,ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ (ರಿ) ಸುಳ್ಯ ವತಿಯಿಂದ ಕಾರ್ಯ

ಸುಳ್ಯ ತಾಲೂಕು ನಗರ ಪಂಚಾಯತ್‌ ಆವರಣದಲ್ಲಿ ಯುದ್ಧಸ್ಮಾರಕ..!ನಾಳೆ ಸಂಜೆ ನಡೆಯಲಿದೆ ವಿಶೇಷ ಕಾರ್ಯಕ್ರಮ..ಏನೇನಿರಲಿದೆ?ಇಲ್ಲಿದೆ ರಿಪೋರ್ಟ್..