ಕರಾವಳಿಕ್ರೀಡೆ/ಸಿನಿಮಾಸುಳ್ಯ

ಸುಳ್ಯ: ’ಮೂಗಜ್ಜನ ಕೋಳಿ’ 13 ನೇ ಲಿಫ್ಟ್-ಆಫ್ ಗ್ಲೋಬಲ್ ನೆಟ್‌ವರ್ಕ್ ಚಲನಚಿತ್ರೋತ್ಸವಕ್ಕೆ ಆಯ್ಕೆ

ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗೌಡ ಜನಾಂಗದ ಮಾತೃಭಾಷೆಯಾಗಿರುವ ಅರೆಭಾಷೆಯಲ್ಲಿ ಇದುವರೆಗೂ ಯಾವೊಂದು ಚಿತ್ರ ಸಹ ನಿರ್ಮಾಣವಾಗಿರಲಿಲ್ಲ. ಇದೀಗ ಈ ಭಾಷೆಯಲ್ಲಿ ‘ಮೂಗಜ್ಜನ ಕೋಳಿ’ ಎಂಬ ಚಿತ್ರ ನಿರ್ಮಾಣವಾಗಿದ್ದು, ‘ಮೂಗಜ್ಜನ ಕೋಳಿ’ 13 ನೇ ಲಿಫ್ಟ್-ಆಫ್ ಗ್ಲೋಬಲ್ ನೆಟ್‌ವರ್ಕ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.ಈ ತಿಂಗಳ ೨೯ರಿಂದ ಚಿತ್ರೋತ್ಸವ ಆರಂಭವಾಗಲಿದೆ.

ಇದೊಂದು ಮಕ್ಕಳ ಚಿತ್ರವಾಗಿದ್ದು, ಈಗಾಗಲೇ ಚಿತ್ರೀಕರಣ ಪೂರ್ಣವಾಗಿ, ಬಿಡುಗಡೆಗೆ ಸಿದ್ದವಾಗಿದೆ. ಸುಳ್ಯದ ಸುತ್ತಮುತ್ತಲ್ಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ಇದು ಅರೆಭಾಷೆಯಲ್ಲಿ ನಿರ್ಮಾಣವಾಗಿರುವ ಪ್ರಥಮ ಚಿತ್ರ. ಕೆ.ಸುರೇಶ್ ಈ ಚಿತ್ರದ ನಿರ್ಮಾಪಕರು. ಬಯಲುಸೀಮೆಯಲ್ಲಿ ಬೆಳೆದ ಹುಡುಗಿಯೊಬ್ಬಳು ಸುಳ್ಯಕ್ಕೆ ಬರುತ್ತಾಳೆ. ಅಲ್ಲಿನ ಸುಂದರ ಪರಿಸರ ಕಂಡು ಮುಗ್ಧ ಪ್ರಶ್ನೆಗಳನ್ನು ಕೇಳುತ್ತಾಳೆ. ಈ ಹುಡುಗಿಯ ಪಕ್ಕದ ಮನೆಯಲ್ಲಿ ಮಾತುಬಾರದ ಮೂಗಜ್ಜ, ಕೋಳಿ ಸಾಕಿಕೊಂಡು ಇರುತ್ತಾನೆ. ಈ ಹುಡುಗಿ ಹಾಗೂ ಮೂಗಜ್ಜನ ನಡುವೆ ನಡೆಯುವ ಸಂಘರ್ಷ ಹಾಗೂ ಸಂಬಂಧಗಳ ಕಥೆಯೇ ‘ಮೂಗಜ್ಜನ ಕೋಳಿ” ಎಂದು ಕಥೆಯ ಬಗ್ಗೆ ಹೇಳುತ್ತಾರೆ ಸಂತೋಷ್​ ಮಾಡ.

ಮೂಗಜ್ಜನ ಪಾತ್ರದಲ್ಲಿ ನವೀನ್ ಕೆ ಪಡೀಲ್ ಹಾಗೂ ಕನಸು ಎಂಬ ಮಗುವಿನ ಪಾತ್ರದಲ್ಲಿ ಕುಮಾರಿ ಗೌರಿಕ ದೀಪುಲಾಲ್ ಅಭಿನಯಿಸಿದ್ದಾರೆ. ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಾಜೆ, ರೂಪಶ್ರೀ ವರ್ಕಾಡಿ, ಸುಕನ್ಯ, ರಾಘವೇಂದ್ರ ಭಟ್, ಡಾ. ಜೀವನ್ ರಾಮ್ ಸುಳ್ಯ, ಕುಮಾರಿ‌ ಸಾನಿಧ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ.

Related posts

ಮಾಜಿ CM ಡಿವಿ ಸದಾನಂದ ಗೌಡರಿಗಿಲ್ಲ ಲೋಕಸಭಾ ಚುನಾವಣಾ ಟಿಕೆಟ್‌? ಗೌಡ್ರು ಮುಂದೇನು ಮಾಡ್ತಾರೆ?

ಸುಳ್ಯ: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ, ಸ್ಥಳದಲ್ಲೇ ಮೃತಪಟ್ಟ ಪಾದಾಚಾರಿ

ಸುಳ್ಯ: ಬೇಂಗಮಲೆ ಬಳಿ ಸರಣಿ ಅಪಘಾತ, ಇನ್ನೋವಾ, ನೆಕ್ಸಾನ್ , ಟಿಪ್ಪರ್ ನಡುವೆ ಪರಸ್ಪರ ಅವಘಡ ಸಂಭವಿಸಿದ್ದು ಹೇಗೆ..?