ಕರಾವಳಿಸುಳ್ಯ

ಸುಳ್ಯ:ಮಗುವಿನ ಕುತ್ತಿಗೆಯಲ್ಲಿದ್ದ ಸರ ಕಳವುಗೈದ ಖತರ್ನಾಕ್ ಕಳ್ಳ!,ನೊಂದ ಫೋಷಕರಿಂದ ಪೊಲೀಸ್ ಕಂಪ್ಲೆಂಟ್

ನ್ಯೂಸ್ ನಾಟೌಟ್ : ಕಳ್ಳನೋರ್ವ ಮದುವೆ ಹಾಲ್‌ನಲ್ಲಿ ಮಗುವಿನ ಕುತ್ತಿಗೆಯಲ್ಲಿದ್ದ ಸರ ಕಳ್ಳತನ ಮಾಡಿದ ಘಟನೆ ಸುಳ್ಯದಲ್ಲಿ ನಡೆದಿದೆ.ಪೋಷಕರು 5 ವರ್ಷ ಪ್ರಾಯದ ಮಗ ಪೂರ್ವಿಕ್ ನೊಂದಿಗೆ ಮದುವೆ ಹಾಲ್ ಗೆ ತೆರಳಿದ್ದರು.ಈ ವೇಳೆ ಕಳ್ಳನೋರ್ವ ನೀರು ಕುಡಿಯಲೆಂದು ಹೋದ ಮಗುವನ್ನು ಸೈಡ್ ಗೆ ಕರೆದು ಆತನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕದ್ದೊಯ್ದಿದ್ದಾನೆ.

ಈ ವೇಳೆ ಗಾಬರಿಯಾದ ಪೋಷಕರು ಕಳ್ಳನಿಗಾಗಿ ಹುಡುಕಾಟ ನಡೆಸಿದರೂ ಆತ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.ಸುಳ್ಯದ ಕಾಯರ್ತೋಡಿ ದೇವಸ್ಥಾನದ ಹಾಲ್ ನಲ್ಲಿ ಮದುವೆ ಕಾರ್ಯಕ್ರಮವನ್ನು ಏರ್ಪಾಟು ಮಾಡಲಾಗಿತ್ತು.ಈ ಮದುವೆಗಾಗಿ ಐವರ್ನಾಡು ಗ್ರಾಮದ ಮಡ್ತಿಲ ಮನೆ ಶಿವಪ್ರಸಾದ್ ಎಂ.ಆರ್. ದಂಪತಿ ಬಂದಿದ್ದರು.ಮಗು ನೀರು ಬೇಕೆಂದು ನೀರು ಕುಡಿಯಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.ಸುಮಾರು 2 ಪವನ್ ಚಿನ್ನದ ಸರ ಇದಾಗಿದ್ದು,ಇತ್ತೀಚೆಗಷ್ಟೇ ಖರೀದಿಸಿದ್ದರು.

ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಮಗುವಿನ ತಂದೆ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ದೂರಿನಲ್ಲಿ ಮಗನ ಕುತ್ತಿಗೆಯಿಂದ ಸರವನ್ನು ಎಳೆಯುವ ಸಂದರ್ಭ ಕುತ್ತಿಗೆಯ ಮೇಲ್ಬಾಗಕ್ಕೆ ಮತ್ತು ಬಲಗಣ್ಣಿನ ಬಳಿಯಲ್ಲಿ, ಎಡಕಿವಿಯ ಮೇಲ್ಬಾಗದಲ್ಲಿ ಸಣ್ಣ ಗಾಯಗಳಾಗಿವೆಂದು ಹೇಳಿದ್ದಾರೆ. ಮದುವೆ ಹಾಲ್ ನಲ್ಲಿ ಸಿಸಿ ಕ್ಯಾಮರಾ ಇಲ್ಲದೇ ಇದ್ದುದರಿಂದ ಆತನನ್ನು ಹುಡುಕುವುದು ಕಷ್ಟವಾಯಿತು.ಇದನ್ನೆ ದುರುಪಯೋಗ ಪಡಿಸಿಕೊಂಡ ಕಳ್ಳ ಈ ಕೃತ್ಯ ಎಸಗಿದ್ದು,ಆತನನ್ನು ಕೂಡಲೇ ಪತ್ತೆ ಹಚ್ಚಿ ನ್ಯಾಯ ಒದಗಿಸಿಕೊಡಬೇಕೆಂದು ದೂರಿನಲ್ಲಿ ಹೇಳಿದ್ದಾರೆ.

Related posts

ಸುಳ್ಯ: ನಾಳೆ ಜಿಲ್ಲಾಮಟ್ಟದ ಬಾಲಕ-ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಕೂಟ ಆಯೋಜನೆ, ಬೆಳಗ್ಗೆ 10 ಗಂಟೆಗೆ ಕೂಟಕ್ಕೆ ಚಾಲನೆ

ಯುವಕರಿಗೆ ಚಕ್ರವರ್ತಿ ಸೂಲಿಬೆಲೆ ಅಕ್ರಮ ಶಸ್ತ್ರಾಸ್ತ್ರ ತರಬೇತಿ?

ಧರ್ಮಸ್ಥಳದಿಂದ ಸೌತಡ್ಕ ಗಣಪತಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಅಪಘಾತ, ಹಲವರಿಗೆ ಗಾಯ