ಕರಾವಳಿಸುಳ್ಯ

ಸುಳ್ಯ:ವಿದ್ಯಾರ್ಥಿಗಳ ಪ್ರವಾಸದಿಂದುಳಿದ ನಗದನ್ನೇ ದೋಚಿದ ಖದೀಮರು..!,ಶಾಲೆಯ ಬೀಗ ಮುರಿದು ಒಳಪ್ರವೇಶಿಸಿ ಕೃತ್ಯ, ಕಳ್ಳರು ದೋಚಿಕೊಂಡು ಹೋದ ಹಣವೆಷ್ಟು?

ನ್ಯೂಸ್ ನಾಟೌಟ್:ಪ್ರವಾಸ ಹೋಗಬೇಕೆನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಕನಸಾಗಿರುತ್ತದೆ.ಶಾಲಾ ಅವಧಿಯಲ್ಲಿ ಹೊಸ ಹೊಸ ಸ್ಥಳಗಳ ಪರಿಚಯ ಮಾಡಿಕೊಳ್ಳೋದರ ಜತೆಗೆ ವರ್ಷಕ್ಕೊಮ್ಮೆ ಇಂತಹ ಅಪೂರ್ವ ಕ್ಷಣವನ್ನು ಯಾರೂ ಮಿಸ್ ಮಾಡಿಕೊಳ್ಳಲು ರೆಡಿ ಇರೋದಿಲ್ಲ..ಹೀಗೆ ಪ್ರವಾಸ ತೆರಳಿ ಊರಿಗೆ ಮರಳಿದ್ದ ವಿದ್ಯಾರ್ಥಿಗಳ ಪ್ರವಾಸದಿಂದ ಉಳಿದ ಮೂವತ್ತು ಸಾವಿರ ಹಣವನ್ನು ಶಾಲಾ ಟೇಬಲ್ ಡ್ರಾವೆರ್‌ನಲ್ಲಿ ತೆಗೆದಿಡಲಾಗಿತ್ತು.ಈ ಹಣವನ್ನೇ ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ಸುಳ್ಯ ತಾಲೂಕಿನ ಐವರ್ನಾಡಿನಿಂದ ವರದಿಯಾಗಿದೆ.

ಬೆಳ್ಳಾರೆ ಠಾಣಾ ವ್ಯಾಪ್ತಿಯ ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಡಿ.7ರಂದು ರಾತ್ರಿ ವೇಳೆ ನಡೆದಿದೆ.ಬೀಗ ಮುರಿದು ಶಾಲೆಯ ಒಳಪ್ರವೇಶಿಸಿದ ಕಳ್ಳರು ನಗದು ಕಳವುಗೈದಿರುವುದಾಗಿ ತಿಳಿದು ಬಂದಿದೆ.ಬೆಳ್ಳಾರೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

Related posts

ಹೃದಯಾಘಾತದಿಂದ ವ್ಯಕ್ತಿ ಹಠಾತ್ ಸಾವು

ಪೆರ್ಡೂರು ಮೇಳದಿಂದ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ನಿರ್ಗಮನ

ಅನ್ಯಕೋಮಿನ ವ್ಯಕ್ತಿಗೆ ಹಲ್ಲೆ ಪ್ರಕರಣ: ಸುಳ್ಯದ ಹಿಂದೂ ಯುವಕ ಜೈಲಿನಿಂದ ಬಿಡುಗಡೆ, ಯುವಕನಿಗೆ ಜಾಮೀನು ಕೊಡಿಸಿದ ಬಿಜೆಪಿ ಮುಖಂಡ ಹರೀಶ್ ಕಂಜಿಪಿಲಿ ಮತ್ತು ತಂಡ