ಕರಾವಳಿಸುಳ್ಯ

ಸುಳ್ಯ :ಪೊಲೀಸ್ ಠಾಣೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ,ಎಲ್ಲರನ್ನು ಆಕರ್ಷಿಸುವಂತೆ ಮಾಡಿದ ‘ಕರ್ನಾಟಕದ ಭೂಪಟ’

ನ್ಯೂಸ್ ನಾಟೌಟ್ :ಸದಾ ಒತ್ತಡದಿಂದ ಕೆಲಸ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸುಳ್ಯ ಠಾಣೆಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸಿದರು.

ಕನ್ನಡ ಹಬ್ಬದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಠಾಣಾ ಆವರಣದಲ್ಲಿ ‘ಕರ್ನಾಟಕ ರಾಜ್ಯದ ಸುಂದರ ಭೂಪಟ’ ಬಿಡಿಸಿದ್ದು ಎಲ್ಲರನ್ನು ಆಕರ್ಷಿಸುವಂತೆ ಮಾಡಿತ್ತು.ಮಾತ್ರವಲ್ಲ ಕರ್ನಾಟಕ ರಾಜ್ಯದ ಸುಂದರ ಭೂಪಟದ ಸುತ್ತಲೂ ದೀಪವನ್ನು ಹಚ್ಚಿ ‘ಹಚ್ಚೇವು ಕನ್ನಡದ ದೀಪ’ ಎಂಬ ಪದವನ್ನು ಬರೆದು ಹಬ್ಬದ ರೀತಿಯಲ್ಲಿ ಆಚರಿಸಿ ಸಂಭ್ರಮ ಪಟ್ಟರು.

ಈ ವೇಳೆ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ಮಾತನಾಡಿ ‘ಕನ್ನಡದ ಕೀರ್ತಿಗಾಗಿ ಶ್ರಮಿಸಿದ ಮಹಾನ್ ಗಣ್ಯರ’ ಬಗ್ಗೆ ಗುಣಗಾನ ಮಾಡಿದರು.ಈ ಸಂದರ್ಭ ಎಲ್ಲಾ ಅಧಿಕಾರಿಗಳ ಹಾಗೂ ಸಿಬ್ಬಂದಿ ವರ್ಗದವರ ಮನೆಯ ಸದಸ್ಯರು ಮತ್ತು ಪುಟಾಣಿ ಮಕ್ಕಳು ಭಾಗವಹಿಸಿ ಹರ್ಷ ವ್ಯಕ್ತ ಪಡಿಸಿದರು.

ತನಿಖಾ ವಿಭಾಗದ ಎಸ್.ಐ. ಸರಸ್ವತಿ, ಎ.ಎಸ್.ಐ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

Related posts

ಪೇರಡ್ಕ: ಉರೂಸ್ ಸಮಾರಂಭದ ಧ್ವಜಾರೋಹಣ

ಮೀನು ಹಿಡಿಯಲೆಂದು ತೆರಳಿದ್ದ ಬಾಲಕರಿಬ್ಬರು ಕೆರೆ ಪಾಲು,ಹೊಟ್ಟೆ ಪಾಡಿಗೆ ದೂರದೂರಿನಿಂದ ಕೆಲಸಕ್ಕೆ ಬಂದವರು ಪ್ರಾಣವನ್ನೇ ಕಳ್ಕೊಂಡ್ರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ, ನಾಳೆ (ಜು.20) ಕೂಡ ಶಾಲಾ- ಕಾಲೇಜಿಗೆ ರಜೆ