ಕರಾವಳಿಕ್ರೈಂಸುಳ್ಯ

ಸುಳ್ಯ ಕಲ್ಮಕಾರಿನ ಯುವಕ ಚಿಕ್ಕಮಗಳೂರಲ್ಲಿ ಆತ್ಮಹತ್ಯೆ!

ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಯುವಕನೋರ್ವ ಮಾ.22ರಂದು ಚಿಕ್ಕಮಗಳೂರಿನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕಲ್ಮಕಾರು ಗ್ರಾಮದ ಮೆಂಟೆಕಜೆ ತೇಜಕುಮಾರ್ ಅವರ ಪುತ್ರ ಲೋಕೇಶ(25) ಆತಹ್ಮತ್ಯೆ ಮಾಡಿಕೊಂಡ ಯುವಕ ಎಂದು ತಿಳಿದುಬಂದಿದೆ. ಈತ ಚಿಕ್ಕಮಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಚಿಕ್ಕಮಗಳೂರಿನಲ್ಲಿದ್ದ ತನ್ನ ರೂಮಿನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಚಿಕ್ಕಮಗಳೂರು ಪೊಲೀಸರು ಭೇಟಿ ನೀಡಿದ್ದು, ತನಿಖೆ ಮುಂದುವರಿಸಿದ್ದಾರೆ. ಮೃತ ಲೋಕೇಶ್ ತಂದೆ, ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.

Related posts

5 ವರ್ಷದ ಮಗುವಿಗೆ ಹೃದಯಾಘಾತ..! ಮನೆಯವರು ಮರಣೋತ್ತರ ಪರೀಕ್ಷೆಗೆ ಒಪ್ಪಲಿಲ್ಲವೇಕೆ..?

ಬೆಳ್ತಂಗಡಿ: ಚರ್ಮರೋಗಕ್ಕೆ ರಾಮಬಾಣವೆಂಬಂತಿದ್ದ ಇಲ್ಲಿ ನೀರೇ ಇಲ್ಲ! ಇದೇ ಮೊದಲ ಬಾರಿ ಬತ್ತಿ ಹೋಗಿರುವ ಬಿಸಿ ನೀರ ಚಿಲುಮೆ

ಶಾಲಾ ವಿದ್ಯಾರ್ಥಿಗಳಿಗೆ ಇನ್ನು ಪ್ರತಿದಿನ ಮೊಟ್ಟೆ ವಿತರಣೆ..! ಅಜೀಂ ಪ್ರೇಮ್‌ಜೀ ಪ್ರತಿಷ್ಠಾನದಿಂದ 1500 ಕೋಟಿ ರೂ. ಖರ್ಚು..!