ಕರಾವಳಿಸುಳ್ಯ

ಸುಳ್ಯ : ಕಳಂಜದ ಮಸೂದ್ ಹತ್ಯೆ ಪ್ರಕರಣ,ಬಂಧಿತ 7ನೇ ಆರೋಪಿಗೆ ಷರತ್ತುಬದ್ಧ ಜಾಮೀನು

ನ್ಯೂಸ್ ನಾಟೌಟ್ : ಸುಳ್ಯದ ಕಳಂಜದಲ್ಲಿ ಕಳೆದ ಒಂದು ವರ್ಷದ ಹಿಂದೆ ನಡೆದ ಮಸೂದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ್ದ ಆರೋಪಿಗಳ ಪೈಕಿ ಮತ್ತೋರ್ವ ಆರೋಪಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರುಗೊಳಿಸಿದೆ.

ಪ್ರಕರಣದ 7ನೇ ಆರೋಪಿಯಾಗಿರುವ ಜಿಮ್‌ ರಂಜಿತ್ ಜಾಮೀನು ಕೋರಿ ವಕೀಲರ ಮೂಲಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿದ್ದು ಆ.೪ ರಂದು ಷರತ್ತುಬದ್ಧ ಜಾಮೀನು ಮಂಜೂರು ಗೊಳಿಸಿರುವುದಾಗಿ ತಿಳಿದುಬಂದಿದೆ.

2022 ಜು.19ರಂದು ಕಳಂಜದಲ್ಲಿ 8 ಮಂದಿ ಯುವಕರ ತಂಡ ಮಸೂದ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಗಂಭೀರ ಗಾಯಗೊಂಡ ಮಸೂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿ 8 ಮಂದಿ‌ ಆರೋಪಿಗಳನ್ನು ಬೆಳ್ಳಾರೆ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಈ ಸಂದರ್ಭ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.ಹಿರಿಯ ವಕೀಲರಾದ ಅರುಣ್ ಶ್ಯಾಮ್ ಪುತ್ತೂರು ವಾದ ಮಂಡಿಸಿದರು. ವಕೀಲರಾದ ಸುಯೋಗ್ ಹೇರಳೆ ಹಾಗೂ ನಿಶಾಂತ್ ವಕಾಲತ್ತು ಹಾಕಿದ್ದರು.ಇಂದು ಪ್ರಕರಣದ ೭ನೇ ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಗೊಂಡಿದೆ.ನಿನ್ನೆಯಷ್ಟೇ ಪ್ರಕರಣದ ೮ನೇ ಆರೋಪಿಗೆ ಷರತ್ತು ಬದ್ಧ ಜಾಮೀನು ಮಂಜೂರಾಗಿತ್ತು.

Related posts

ಸುಳ್ಯ: ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ ನಿಲ್ಲಬೇಕಾದ ಜಾಗದಲ್ಲಿ ಖಾಸಗಿ ಕಾರುಗಳ ದರ್ಬಾರ್..!, ತುರ್ತು ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್ ನಲ್ಲಿದ್ದ ರೋಗಿಯ ಇಳಿಸಲು ಪರದಾಟ

ಕಲ್ಲುಗುಂಡಿ: ಏ.26ರಂದು ಲೋಕಸಭಾ ಚುನಾವಣೆ ಹಿನ್ನಲೆ , ಚೆಕ್‌ ಪೋಸ್ಟ್‌ ನಲ್ಲಿ ವಾಹನಗಳ ತಪಾಸಣೆ ಕಾರ್ಯ ಬಿರುಸು

ಸುಳ್ಯದ ಕಾಂತಮಂಗಲದಲ್ಲಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಹಂತಕನ ಫೋಟೋ ರಿವಿಲ್, ಇಲ್ಲಿದೆ ನೋಡಿ ಹಂತಕನ EXCLUSIVE ಫೋಟೋ