ಕರಾವಳಿಸುಳ್ಯ

ಸುಳ್ಯ:ಮದ್ಯದ ನಶೆಯಲ್ಲಿ ತಂದೆ-ತಾಯಿ ಮೇಲೆ ಯದ್ವಾತದ್ವಾ ಕತ್ತಿ ಬೀಸಿದ ಪ್ರಕರಣ , ಆರೋಪಿ ಮಗ ಅರೆಸ್ಟ್

ನ್ಯೂಸ್ ನಾಟೌಟ್: ಮದ್ಯದ ನಶೆಯಲ್ಲಿ ಪುಂಡ ಮಗನೊಬ್ಬ ಹೆತ್ತ ತಂದೆ-ತಾಯಿಯ ಮೇಲೆಯೇ ಕತ್ತಿಯಿಂದ ದಾಳಿ ನಡೆಸಿದ ಘಟನೆ ಸೋಮವಾರ ಸಂಜೆ ಬೆಳ್ಳಾರೆ ಸಮೀಪದ ಕಲ್ಲುಪಣೆ ಎಂಬಲ್ಲಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಮಗನನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ.

ಗಂಭೀರವಾಗಿ ಗಾಯಗೊಂಡಿರುವ ತಂದೆ-ತಾಯಿಯನ್ನು ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ. ಜಾಗದ ವಿಚಾರಕ್ಕೆ ಸಂಬಂಧಪಟ್ಟಂತೆ ಈ ಕೃತ್ಯವೆಸಗಿದ್ದು,ಆರೋಪಿ ಕಂಠಪೂರ್ತಿ ಕುಡಿದಿದ್ದನೆಂದು ವರದಿಯಾಗಿತ್ತು. ದೇವಿ ಪ್ರಸಾದ್‌ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಲಗದ್ದೆ ನಿವಾಸಿಗಳಾದ ಮಂಜುನಾಥ್ ಆಚಾರ್, ಧರ್ಮಾವತಿ ದಂಪತಿ ಪುತ್ರ.

Related posts

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ: ಸರ್ಪಸಂಸ್ಕಾರ ಸೇವೆಯ ಸೇವಾ ದರ ಪರಿಷ್ಕರಣೆ 

ಮಗನನ್ನು ಕೊಂದ ಸುಚನಾ ಸೇಠ್‌ಗೆ ಯಾವುದೇ ಮಾನಸಿಕ ಖಿನ್ನತೆ ಇಲ್ಲ..!ಈ ಬಗ್ಗೆ ಪೊಲೀಸರು ಹೇಳಿದ್ದೇನು? ಸುಚನಾ ತಂದೆ ‘ಆಕೆಗೆ ಮಾನಸಿಕ ಖಿನ್ನತೆ ಇದೆ’ ಎಂದದ್ದೇಕೆ?

ಪುತ್ತೂರು: ರಿಕ್ಷಾ ಏರಿದ ಹುಡುಗಿ ಜೊತೆ ಅಸಭ್ಯ ವರ್ತನೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲು