ಕರಾವಳಿಸುಳ್ಯ

ಸುಳ್ಯ:ಪಯಸ್ವಿನಿ ಜೇಸೀಸ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ;ಅಧ್ಯಕ್ಷರಾಗಿ ಗುರುಪ್ರಸಾದ್ ನಾಯಕ್, ಕಾರ್ಯದರ್ಶಿಯಾಗಿ ಪ್ರಕಾಶ್‌ ಪಿ.ಎಸ್‌.

ನ್ಯೂಸ್‌ ನಾಟೌಟ್‌ :ಸುಳ್ಯದ ಜೇಸೀಸ್ ಸುಳ್ಯ ಪಯಸ್ವಿನಿ ಇದರ 2024-25 ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.26 ರಂದು ಎ.ಪಿ.ಎಂ.ಸಿ. ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದ ಪೂರ್ವಾರ್ಧದ ಅಧ್ಯಕ್ಷತೆಯನ್ನು ಜೇಸೀ ಅಧ್ಯಕ್ಷ ಕೆ.ಎಂ.ನವೀನ್‌ ವಹಿಸಿದ್ದರು.

ಈ ವೇಳೆ ನೂತನ ಅಧ್ಯಕ್ಷ ಗುರುಪ್ರಸಾದ್ ನಾಯಕ್‌ರಿಗೆ ನವೀನ್‌ರವರು ಪ್ರಮಾಣವಚನ ಬೋಧಿಸಿದರು.ಬಳಿಕ ಪದಪ್ರದಾನಗೈದರು.ಬಳಿಕ ತನ್ನ ತಂಡದ ನೂತನ ಪದಾಧಿಕಾರಿಗಳಿಗೆ ಗುರುಪ್ರಸಾದ್ ಪ್ರಮಾಣವಚನ ಬೋಧಿಸಿದರು.

ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಗುರುಪ್ರಸಾದ್ “ಈ ಬಾರಿ ಪಯಸ್ವಿನಿ ಜೇಸಿಯಲ್ಲಿ ಕ್ರೀಡಾ ಚಟುವಟಿಕೆಗೆ ಹೆಚ್ಚು ಆದ್ಯತೆ ನೀಡುವುದಾಗಿ ಹೇಳಿದರು.ಜೇಸಿ ಭವನದ ಕಾಮಗಾರಿ ಈ ಬಾರಿ ಪೂರ್ಣಗೊಳಿಸುವ ವಿಶ್ವಾಸ ಇರುವುದಾಗಿ ಅವರು ಹೇಳಿದರು.ನಿಕಟಪೂರ್ವ ಅಧ್ಯಕ್ಷ ರಂಜಿತ್ ಕುಕ್ಕೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ನಿರ್ಗಮನ ಕಾರ್ಯದರ್ಶಿ ಸುರೇಶ್ ಕಾಮತ್, ಜೆ.ಜೆ. ನಿರ್ಗಮನಾಧ್ಯಕ್ಷ ಅಕ್ಷತ್, ನೂತನ ಕಾರ್ಯದರ್ಶಿ ಪ್ರಕಾಶ್ ಪಿ.ಎಸ್., ನೂತನ ಜೆಜೆ ಅಧ್ಯಕ್ಷ ಅಂಕಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಲಯ ಉಪಾಧ್ಯಕ್ಷ ಅಭಿಷೇಕ್ ಜಿ.ಎಂ. ಆರು ಮಂದಿ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಿದರು. ಜೇಸೀ ಸೀನಿಯ‌ರ್ ಲೀಜನ್ ಅಧ್ಯಕ್ಷ ಪಿ.ಎಸ್.ಗಂಗಾಧ‌ರ್ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಶಾರದಾ ಕಾಲೇಜಿನ ಸಂಚಾಲಕಿ ಡಾ.ರೇವತಿ ನಂದನ್ ಹಾಗೂ ಬೆಳ್ಳಾರೆ ಡಾ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ದಾಮೋದರ ಕಣಜಾಲು ಭಾಗವಹಿಸಿದ್ದರು.ಜೇಸೀ ನಿಕಟಪೂರ್ವಾಧ್ಯಕ್ಷ ರಂಜಿತ್ ಕುಕ್ಕೆಟ್ಟಿ, ನಿರ್ಗಮನ ಕಾರ್ಯದರ್ಶಿ ಸುರೇಶ್ ಕಾಮತ್ ಜಯನಗರ, ನಿರ್ಗಮನ ಜೆ.ಜೆ. ಅಧ್ಯಕ್ಷ ಅಕ್ಷತ್, ನಿರ್ಗಮನ ಜೇಸಿರೆಟ್ ಅಧ್ಯಕ್ಷೆ ಶ್ರೀಮತಿ ಉಷಾ ನವೀನ್, ನೂತನ ಜೇಸಿರೆಟ್‌ ಅಧ್ಯಕ್ಷೆ ಶ್ರೀಮತಿ ಲತಾ ಸುಪ್ರೀತ್ ಮೋಂಟಡ್ಕ,ನೂತನ ಜೆ.ಜೆ. ಅಧ್ಯಕ್ಷ ಅಂಕಿತ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಪ್ರಕಾಶ್ ಪಿ.ಎಸ್. ವಂದಿಸಿದರು.

Related posts

ಚಾರ್ಜ್ ನಲ್ಲಿದ್ದ ಮೊಬೈಲ್ ನಲ್ಲಿ ವಿಡಿಯೋ ನೋಡುತ್ತಿದ್ದ ವೇಳೆ ಮೊಬೈಲ್ ಸ್ಪೋಟ, ದಂಪತಿಯ ಒಬ್ಬಳೆ ಪುತ್ರಿ ದುರಂತ ಅಂತ್ಯ

ಮೋದಿ ಆಗಮನಕ್ಕೂ ಮೊದಲು ಜಾಲತಾಣದಲ್ಲಿ ನಳಿನ್ ಬೇಡ ಅಭಿಯಾನ

ಬಂಟ್ವಾಳ: ಮನೆಯ ಬೀಗ ಮುರಿದು ಚಿನ್ನ – ಹಣ ದೋಚಿದ ಕಳ್ಳರು..! ಪ್ರಕರಣ ದಾಖಲು