ಕರಾವಳಿಸುಳ್ಯ

ಸುಳ್ಯ: ಶ್ರೀಕ್ಷೇತ್ರ ಧರ್ಮಸ್ಥಳದಿಂದ ಅನುದಾನ ಮಂಜೂರು;ಮಂಡೆಕೋಲು ಶಾಲೆಗೆ ಬಂತು ಹೊಸ ಲುಕ್..!

ನ್ಯೂಸ್‌ ನಾಟೌಟ್‌ : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಂಡೆಕೋಲು ಇಲ್ಲಿ ನೂತನವಾಗಿ ರಚನೆಗೊಂಡಿರುವ ಅಕ್ಷರ ದಾಸೋಹ ಕೊಠಡಿ ಹಾಗೂ ಭೋಜನ ಶಾಲೆಯ ರಚನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಒಂದು ಲಕ್ಷ ರೂ. ಮಂಜೂರುಗೊಂಡಿದೆ.

ಈ ದಿನ ಅನುದಾನದ ಮಂಜುರಾತಿ ಪತ್ರವನ್ನು ಶಾಲಾಭಿವೃದ್ಧಿ ಸಮಿತಿಗೆ ಹಸ್ತಾಂತರಿಸಲಾಯಿತು.ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿ ನಾಗೇಶ್ ಪಿ ಹಾಗೂ ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕರವರು ಮಂಜೂರಾತಿ ಪತ್ರವನ್ನು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪ್ರಕಾಶ್ ಕಣೆಮರಡ್ಕ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಮಂಜುಳಾರವರಿಗೆ ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ಯೋಜನೆಯ ಉಡುಪಿ ಪ್ರಾದೇಶಿಕ ವಿಭಾಗದ ವಿಜಿಲೆನ್ಸ್ ವಿಭಾಗದ ಅಧಿಕಾರಿ ಕೃಷ್ಣಪ್ಪ, ವಲಯ ಮೇಲ್ವಿಚಾರಕರಾದ ವಿಶಾಲ, ಗ್ರಾಮ ಪಂಚಾಯತ್ ಸದಸ್ಯ ಅನಿಲ್ ತೋಟಪ್ಪಾಡಿ, ಒಕ್ಕೂಟದ ಉಪಾಧ್ಯಕ್ಷೆ ಮೋಹಿನಿ, ಕಾರ್ಯದರ್ಶಿ ಸತ್ಯಲತಾ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಭವ್ಯಾ, ಸೇವಾಪ್ರತಿನಿಧಿ ವೇದಾವತಿ, ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ, ಎಸ್.ಡಿ.ಎಮ್.ಸಿ ಸದಸ್ಯರಾದ ರವಿ ಕಣೆಮರಡ್ಕ, ಸುಮಿತ, ಹೇಮಾವತಿ,ಪ್ರಫುಲ್ಲಾ, ನಾರಾಯಿಣಿ, ಪುಷ್ಪಾವತಿ, ಮಾಯಿಲಪ್ಪ ಮಂಡೆಕೋಲು ಹಾಗೂ ಶಾಲಾ ಅದ್ಯಾಪಕ ವೃಂದದವರು ಉಪಸ್ಥಿತರಿದ್ದರು.ಶಾಲಾ ಅಧ್ಯಾಪಕರಾದ ಮಧುಸೂದನ್ ಸ್ವಾಗತಿಸಿ ದೈಹಿಕ ಶಿಕ್ಷಕಿ ವನಿತಾ ವಂದಿಸಿದರು.

Related posts

ನಿಡ್ಲೆ: ರಿಕ್ಷಾಕ್ಕೆ ಕಾರು ಡಿಕ್ಕಿ, ಹಲವರಿಗೆ ಗಾಯ

ಕಾರುಗಳ ನಡುವೆ ಡಿಕ್ಕಿ, ಏಳು ಮಂದಿಗೆ ಗಾಯ

ಪೊಲೀಸರ ಎದುರಲ್ಲೇ ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ..! 8 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು