ಸುಳ್ಯ

ಸುಳ್ಯ: ರಬ್ಬರ್ ನೆಲಹಾಸು ವಿತರಣೆ,ಉಚಿತ ರೇಬಿಸ್ ಲಸಿಕೆ ಕಾರ್ಯಕ್ರಮ;ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರಿಂದ ಉದ್ಘಾಟನೆ

ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಆಶ್ರಯದಲ್ಲಿ ರಬ್ಬರ್ ನೆಲಹಾಸು ವಿತರಣೆ ಹಾಗೂ ಉಚಿತ ರೇಬಿಸ್ ಲಸಿಕೆ ಕಾರ್ಯಕ್ರಮ,ಪಶು ಸಖಿಯರಿಗೆ ಕಿಟ್ ವಿತರಣೆಯು ಇಂದು ನಡೆಯಿತು.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು.

ಸುಳ್ಯ ಪಶು ಆಸ್ಪತ್ರೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ “ಗೋ ಶಾಲೆಯ ಅಭಿವೃದ್ಧಿ ರಾಜ್ಯದ ಎಲ್ಲ ಕಡೆಗಳಲ್ಲಿ ಆಗಬೇಕಾಗಿದೆ. ಸಾಕು ಪ್ರಾಣಿಗಳ ನೋವಿಗೆ ಪಶುವೈದ್ಯಾಧಿಕಾರಿಗಳು ಉತ್ತಮ ರೀತಿಯಲ್ಲಿ ಚಿಕಿತ್ಸೆ ಕೊಡುವ ಮೂಲಕ ಮೂಕ ಪ್ರಾಣಿಗಳ ವೇದನೆ ಸ್ಪಂದಿಸುತ್ತಿದ್ದಾರೆ.ಒಂದು ವೇಳೆ ಸಾಕು ಪ್ರಾಣಿಗಳನ್ನು ಪೋಷಿಸಲು ಕಷ್ಟವಾದರೆ ಪಶುಪಾಲನಾ ಆಸ್ಪತ್ರೆಯಲ್ಲೇ ವ್ಯವಸ್ಥೆ ಕಲ್ಪಿಸುವ ಕೆಲಸವಾಗಬೇಕಾಗಿದೆ ಎಂದು ಹೇಳಿದರು.

ಬಳಿಕ ಆಸ್ಪತ್ರೆಯ ಮೂಲಭೂತ ಸೌಕರ್ಯ ಮತ್ತು ಆ್ಯಂಬುಲೆನ್ಸ್ ಸೌಕರ್ಯಗಳನ್ನು ವೀಕ್ಷಿಸಿದರು.ಈ ಸಂದರ್ಭದಲ್ಲಿ ಡಾ .ನಿತಿನ್ ಪ್ರಭು, ಡಾ. ನಾಗರಾಜ್ , ಡಾ. ಸೂರ್ಯ ನಾರಾಯಣ ಬಿ.ಕೆ , ಜಾನುವಾರು ಅಭಿವೃದ್ಧಿ ಅಧಿಕಾರಿ ಪುಷ್ಪರಾಜ್ ಶೆಟ್ಟಿ, ಡಾ. ವೆಂಕಟಾಚಲಪತಿ ,ಸಿಬ್ಬಂದಿ ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.

Related posts

ಸಂಪಾಜೆ : ಮನೆ ಮೇಲೆ ಬಿದ್ದ ಬೃಹತ್ ಗಾತ್ರದ ಮರ,ಪವಾಡವೆಂಬಂತೆ ಪ್ರಾಣಾಪಾಯದಿಂದ ಪಾರಾದ ವೃದ್ದೆ..!

ಪೆರಾಜೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ..! ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಸುಳ್ಯ :ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯ ವಿತರಣೆ,ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ಕಾರ್ಯಕ್ರಮ