ಕರಾವಳಿಸುಳ್ಯ

ಸುಳ್ಯ: 23 ಮಂದಿ ಪೌರಕಾರ್ಮಿಕರಿಗೆ ಕಿಟ್ ವಿತರಣೆ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಕಾರ್ಯಕ್ಕೆ ಮೆಚ್ಚುಗೆ

261

ನ್ಯೂಸ್ ನಾಟೌಟ್: ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸುಳ್ಯದ ಕೆವಿಜಿಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿಯವರ ವತಿಯಿಂದ ಸುಳ್ಯದ 23 ಮಂದಿ ಪೌರಕಾರ್ಮಿಕರಿಗೆ ಕಿಟ್ ವಿತರಣೆ ಮಾಡಲಾಗಿದೆ. ಸ್ವಚ್ಛತೆಯ ಯೋಧರಿಗೆ ಬಗ್ಗೆ ಅವರು ಹೊಂದಿರುವ ಕಾಳಜಿಯನ್ನು ಹಲವಾರು ಮಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅ.02 ರಂದು ಗಾಂಧಿ ಜಯಂತಿ ದಿನಾಚರಣೆ ಪ್ರಯುಕ್ತ ಸುಳ್ಯ ನಗರ ಪಂಚಾಯತ್ ನಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ. ಸಿ ರವರ ವತಿಯಿಂದ ಕಿಟ್ ನೀಡಲಾಗಿತ್ತು. ಇದನ್ನು ಅಮರ ಸುಳ್ಯ ರಮಣೀಯ ತಂಡದ ಸದಸ್ಯರ ಸಮ್ಮುಖದಲ್ಲಿ 23 ಮಂದಿ ಪೌರಕಾರ್ಮಿಕರಿಗೆ ಹಸ್ತಾಂತರಿಸಲಾಗಿತ್ತು. ಸ್ನೇಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ದಾಮ್ಲೆ, ಖ್ಯಾತ ರಕ್ತದಾನಿ ಪಿ.ಬಿ ಸುಧಾಕರ ರೈ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ ,ನಗರ ಪಂಚಾಯತ್ ಸಿಬ್ಬಂದಿ ಹಾಜರಿದ್ದರು.

See also  ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳುತ್ತಿರುವ ಶಾನ್ ಇಬ್ರಾಹಿಂ ಗೂನಡ್ಕ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget