ಕರಾವಳಿಸುಳ್ಯ

ಸುಳ್ಯ:ಪಂಜದಲ್ಲಿ ವಿದ್ಯುತ್ ಕಂಬಕ್ಕೆ ತಾಗಿದ ಕಾಂಕ್ರೀಟ್ ಮಿಕ್ಸರ್ ಯಂತ್ರ,ಅಪಾರ ಹಾನಿ,ಅದೃಷ್ಟವಶಾತ್ ಪಾರಾದ ಚಾಲಕ

ನ್ಯೂಸ್ ನಾಟೌಟ್:ಸುಳ್ಯದ ಪಂಜ ಪೇಟೆ ಬಳಿ ದುರಂತವೊಂದು ಸಂಭವಿಸಿದ್ದು,ಸ್ವಲ್ಪದರಲ್ಲೇ ಅನಾಹುತ ತಪ್ಪಿದೆ.ಕಾಂಕ್ರೀಟ್‌ ಮಿಕ್ಸರ್‌ ಯಂತ್ರ ಕೊಂಡೊಯ್ಯುತ್ತಿದ್ದ ಲಾರಿ ವಿದ್ಯುತ್‌ ಲೈನ್‌ಗೆ ತಾಗಿದ್ದು, ವಿದ್ಯುತ್‌ ಕಂಬಕ್ಕೆ ಹಾಗೂ ಲೈನ್‌ ಗೆ ಹಾನಿಯಾದ ಘಟನೆ ಮೇ.2 ರಂದು ರಾತ್ರಿ ನಡೆದಿದೆ.

ಏನಿದು ಘಟನೆ?

ಅವಘಡ ಸಂಭವಿಸುತ್ತಿದ್ದಂತೆ ವಿದ್ಯುತ್‌ ಟ್ರಿಪ್‌ ಆದರಿಂದ ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಪಂಜ ಸಮೀಪ ಕಾಂಕ್ರೀಟ್‌ ಕಾಮಗಾರಿಗೆ ತಂದಿದ್ದ ಕಾಂಕ್ರೀಟ್‌ ಮಿಕ್ಸರ್‌ ಯಂತ್ರ ವನ್ನು ಶಿವಮೊಗ್ಗಕ್ಕೆ ಲಾರಿಯಲ್ಲಿ ಹೇರಿ ಕೊಂಡೊಯ್ಯಲಾಗುತ್ತಿತ್ತು.ಪಂಜ ಪೇಟೆಯ ಸಮೀಪ ಚರ್ಚ್‌ ಗೇಟ್‌ ಬಳಿ ರಸ್ತೆಯ ಬದಿಯಲ್ಲಿ ಹಾದು ಹೋದ ವಿದ್ಯುತ್‌ ಲೈನ್‌ ಗೆ ಮಿಕ್ಸರ್‌ ಯಂತ್ರ ತಾಗಿ ವಿದ್ಯುತ್‌ ತಂತಿ ತುಂಡಾಗಿ ಬಿತ್ತು. ಇದೇ ವೇಳೆ ವಿದ್ಯುತ್‌ ಟ್ರಿಪ್‌ ಆಗಿ ಸಂಪರ್ಕ ಕಡಿತ ಗೊಂಡಿತ್ತು.ಹೀಗಾಗಿ ಚಾಲಕ ಪಾರಾಗಿದ್ದಾನೆ.

ಇತ್ತ ಚಾಲಕ ಸ್ಥಳದಲ್ಲೇ ನಿಲ್ಲಿಸದೇ ಲಾರಿ ಚಲಾಯಿಸಿದ ಪರಿಣಾಮ ಪಂಜ ಪೇಟೆಯ ಸಮೀಪ ಇನ್ನೊಂದು ಕಡೆ ಲಾರಿಯಲ್ಲಿದ್ದ ಯಂತ್ರ ಸಿಲುಕಿ ಎರಡು ಕಂಬಗಳು ಸೇರಿದಂತೆ ಹಲವು ಕಡೆ ತಂತಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಮೆಸ್ಕಾಂ ಇಲಾಖೆ ಸಿಬ್ಬಂದಿ ವರ್ಗ ಸ್ಥಳಕ್ಕೆ ಆಗಮಿಸಿದರು. ಲಾರಿ ಚಾಲಕನನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.

Related posts

ಕರಿಮೆಣಸು ಕಳವು : ಐದು ಮಂದಿಯನ್ನು ಬಂಧಿಸಿದ ಪೊಲೀಸರು

ಮಲ್ಪೆ ಸಮುದ್ರದಲ್ಲಿ ಮುಳುಗುತ್ತಿದ್ದ 12ರ ಬಾಲಕನ ರಕ್ಷಣೆ, ಲೈಫ್ ಗಾರ್ಡ್‌ಗಳ ಕಾರ್ಯಕ್ಕೆ ಮೆಚ್ಚುಗೆ

Bellare :ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನ ನೂತನ ರಥಕ್ಕೆ ದಡೆ ಮುಹೂರ್ತ