ನ್ಯೂಸ್ ನಾಟೌಟ್ : ಅಜ್ಜಾವರ,ದೇವಚಳ್ಳ ಮತ್ತು ಅರಂತೋಡು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಾಯಿಗಳಿಗೆ ಉಚಿತವಾಗಿ ರೇಬಿಸ್ ರೋಗ ನಿರೋಧಕ ಲಸಿಕೆಯನ್ನು ನೀಡುವ ಅಭಿಯಾನ ಕಾರ್ಯಕ್ರಮ ನಡೆಯಿತು.
ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 80, ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 75 ಮತ್ತು ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 177 ಸಾಕು ನಾಯಿಗಳಿಗೆ ಉಚಿತವಾಗಿ ರೇಬಿಸ್ ರೋಗ ನಿರೋಧಕ ಲಸಿಕೆ ಹಾಕಲಾಯಿತು.
ಕಾರ್ಯಕ್ರಮದಲ್ಲಿ ಡಾ. ವೆಂಕಟಾಚಲಪತಿ ಮುಖ್ಯ ಪಶು ವೈದ್ಯಾಧಿಕಾರಿ ಗುತ್ತಿಗಾರು ,ಶ್ರೀ ಪುಷ್ಪರಾಜ ಶೆಟ್ಟಿ ಜಾನುವಾರು ಅಭಿವೃದ್ಧಿ ಅಧಿಕಾರಿ ಸುಳ್ಯ ,ಶ್ರೀ ಪಾಲಾಕ್ಷ ಪಶುವೈದ್ಯ ಪರೀಕ್ಷಕರು ಅರಂತೋಡು, ಡಿ.ದರ್ಜೆ ನೌಕರರಾದ ಶ್ರೀ ಹರೀಶ ಮತ್ತು ಶ್ರೀ ಮೋಕ್ಷಿತ್ ಹಾಗೂ ಅರೆ ತಾಂತ್ರಿಕ ಸಿಬ್ಬಂದಿಯಾದ ಶ್ರೀ ಸಾಗರ್ ಭಾಗವಹಿಸಿದ್ದರು. ಅಜ್ಜಾವರ,ದೇವಚಳ್ಳ ಮತ್ತು ಅರಂತೋಡು ಗ್ರಾಮ ಪಂಚಾಯತಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಹಕಾರ ನೀಡಿದವು.