ನ್ಯೂಸ್ ನಾಟೌಟ್ : ಸುಳ್ಯದ ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮ ಶನಿವಾರ (ಮಾ. 8) ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಇದರ ಕಾರ್ಯದರ್ಶಿ ಡಾ| ಐಶ್ವರ್ಯ ಕೆ.ಸಿ., “ಪ್ರತಿಯೊಬ್ಬರ ಬದುಕಿನಲ್ಲೂ ಮಹಿಳೆಯ ಪಾತ್ರ ಇದ್ದೇ ಇದೆ. ಹಲವು ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಕುಟುಂಬವನ್ನು ಸುಂದರವಾಗಿ ಮುನ್ನಡೆಸುವ ಶಕ್ತಿ ಮಹಿಳೆಗಿದೆ. ಈ ಎಲ್ಲಾ ಜವಾಬ್ದಾರಿಗಳ ಮಧ್ಯೆ ಮಹಿಳೆ ತನ್ನನ್ನು ತಾನು ಮರೆಯಬಾರದು ತನಗಾಗಿ ಒಂದಷ್ಟು ಸಮಯವನ್ನು ಮೀಸಲಿಡಬೇಕು. ನಮ್ಮನ್ನು ನಾವು ಪ್ರೀತಿಸಬೇಕು. ಮಹಿಳೆಯರು ಫಿಟ್ ಆಂಡ್ ಫೈನ್ ಆಗಲು ಪೋಷಕಾಂಶಯುಕ್ತ ಆಹಾರ ಸೇವನೆ, ವ್ಯಾಯಾಮ, ಧ್ಯಾನ, ಯೋಗ ಇತ್ಯಾದಿ ಚಟುವಟಿಕೆಗಳು ಮಾಡಬೇಕು ಎಂದರು.
ಸಂಸ್ಥೆಯ ಮಹಿಳೆಯರಿಗಾಗಿ ವಿಶೇಷ ಫಿಟ್ನೆಸ್ ಚಾಲೆಂಜ್ ನ್ಯೂ ಯು ಎಂಬ ಶೀರ್ಷಿಕೆಯಡಿಯಲ್ಲಿ 90 ದಿನಗಳ ಫಿಟ್ನೆಸ್ ತರಬೇತಿಯನ್ನು ಈ ಸಂದರ್ಭ ಉದ್ಘಾಟಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ AOLE(R.) ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಮಹಿಳಾ ದಿನಾಚರಣೆಯ ಶುಭಾಶಯ ನುಡಿಗಳೊಂದಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ಕಾಲೇಜಿನ ಡೀನ್ ಡಾ| ನೀಲಾಂಬಿಕೈ ನಟರಾಜನ್ ಮಾತನಾಡಿ, ಸಾಧಕ ಮಹಿಳೆಯರ ಉದಾಹರಣೆಯೊಂದಿಗೆ ಪ್ರತಿಯೊಬ್ಬ ಮಹಿಳೆಯಲ್ಲಿಯೂ ಸಹ ವಿಶೇಷ ಶಕ್ತಿ , ಪ್ರತಿಭೆ ಇದೆ. ಆಕೆ ಅಬಲೆಯಲ್ಲ ಸಬಲೆ ಎಂದರು.
IMA ಸುಳ್ಯ ಇದರ ಅಧ್ಯಕ್ಷೆ ಡಾ| ವೀಣಾ ಮಹಿಳೆಯ ಕುರಿತಾದ ಸ್ವರಾರಚಿತ ಕವನ ವಾಚಿಸಿದರು. ಬಳಿಕ ಕೇಕ್ ಕತ್ತರಿಸುವುದರ ಮೂಲಕ ಮಹಿಳೆಯರು ವಿಶೇಷ ದಿನವನ್ನು ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಗೌರವ ಪ್ರಾದ್ಯಾಪಕರು ಶೀಲಾ ಜಿ ನಾಯಕ್, ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಪ್ರೊ. ಡಾ| ಲೀಲಾಧರ್ ಡಿ ವಿ, ಕೆವಿಜಿ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ| ಉದಯಕೃಷ್ಣ ಬಿ, ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಇದರ ಪ್ರಾಂಶುಪಾಲೆ ಬಿ.ಎಮ್. ಪ್ರೇಮ, ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಇದರ ಪ್ರಾಂಶುಪಾಲೆ ಚಂದ್ರಾವತಿ, ನೆಹರೂ ಮೆಮೋರಿಯಲ್ ಪಿಯು ಕಾಲೇಜಿನ ಪ್ರಾಂಶುಪಾಲೆ ಮಿಥಾಲಿ ಪಿ. ರೈ, ಅಲೈಡ್ ಹೆಲ್ತ್ ಸೈನ್ಸಸ್ ಇದರ ಪ್ರಾಂಶುಪಾಲೆ ಡಾ| ನವ್ಯ ಬಿ, ಸಂಯೋಜಕಿ ಮತ್ತಿತರರಿದ್ದರು. ಡಾ| ಅಪೂರ್ವ ದೊರೆ ಸ್ವಾಗತಿಸಿದರು. ರಕ್ಷಾ ರೋಜ ಮತ್ತು ಹಿತಾಶ್ರಿ ಪ್ರಾರ್ಥಿಸಿದರು.
ಎನ್.ಎಂ.ಪಿ.ಯು. ಉಪನ್ಯಾಸಕಿ ಕು. ಬೇಬಿ ವಿದ್ಯಾ ಮತ್ತು ಸವಿತಾ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಂಸ್ಥೆಗಳ ಪ್ರಾಂಶುಪಾಲರು, ಆಡಳಿತಾಧಿಕಾರಿಗಳು, ಉಪನ್ಯಾಸಕರು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಕೆವಿಜಿ ಆಯುರ್ವೇದ ಫಾರ್ಮ ರಿಸರ್ಚ್ ಸೆಂಟರ್ ಇದರ ಎಕ್ಸಕ್ಯೂಟಿವ್ ಹರ್ಷಿತ್ ಮರ್ಕಂಜ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.