Latestಕ್ರೀಡೆಕ್ರೀಡೆ/ಸಿನಿಮಾಕ್ರೈಂಸಿನಿಮಾ

ಬೆಟ್ಟಿಂಗ್‌ ಆ್ಯಪ್ ಪ್ರಚಾರ ಮಾಡಿದ ನಟಿಯರು ಮತ್ತು ಮಾಜಿ ಕ್ರಿಕೆಟಿಗರಿಗೆ ಇಡಿ ಸಂಕಷ್ಟ..! ಹರ್ಭಜನ್ ಸಿಂಗ್, ಸುರೇಶ್ ರೈನಾ, ಯುವರಾಜ್ ಸಿಂಗ್, ನಟಿ ಊರ್ವಶಿ ರೌಟೇಲಾಗೆ ವಿಚಾರಣೆ..!

752

ನ್ಯೂಸ್ ನಾಟೌಟ್: ನಿಷೇಧಿತ ಬೆಟ್ಟಿಂಗ್‌ ಆ್ಯಪ್ ಗಳ ಪ್ರಚಾರ ಪ್ರಕರಣ ಸಂಬಂಧ ಇಡಿ (Enforcement Directorate) ತನಿಖೆಯನ್ನು ಮುಂದುವರೆಸಿದ್ದು, ಕೆಲ ಸೆಲೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಬೆಟ್ಟಿಂಗ್‌ ಆ್ಯಪ್ ಪ್ರಚಾರದ ತನಿಖೆಯನ್ನು ಇಡಿ ಚುರುಕುಗೊಳಿಸಿದೆ. ಸೆಲೆಬ್ರಿಟಿಗಳು ಜಾಹೀರಾತಿನಲ್ಲಿ ಕಾಣಿಸಿಕೊಂಡು ಇಂತಹ ಆ್ಯಪ್ ಗಳನ್ನು ಪ್ರಚಾರ ಮಾಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಇಡಿ ಇನ್ನಷ್ಟು ಸೆಲೆಬ್ರಿಟಿಗಳ ವಿಚಾರಣೆಗೆ ಒಳಪಡಿಸಿದ್ದಾರೆ.

1xBet, FairPlay, Parimatch, ಮತ್ತು Lotus365 ಸೇರಿದಂತೆ ನಿಷೇಧಿತ ಬೆಟ್ಟಿಂಗ್ ಪ್ಲಾಟ್‌ ಫಾರ್ಮ್‌ ಗಳ ಪ್ರಚಾರದ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ ಭಾರತದ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್, ಸುರೇಶ್ ರೈನಾ ಮತ್ತು ಯುವರಾಜ್ ಸಿಂಗ್ ಮತ್ತು ನಟ ಸೋನು ಸೂದ್ , ನಟಿ ಊರ್ವಶಿ ರೌಟೇಲಾ ಅವರನ್ನು ವಿಚಾರಣೆಗೆ ಒಳಪಡಿಸಿದೆ ಎಂದು ವರದಿಯಾಗಿದೆ.
ಈ ಆ್ಯಪ್ ಗಳ ಜತೆ ಸೆಲೆಬ್ರಿಟಿಗಳ ಸಂಪರ್ಕ ಮತ್ತು ಒಪ್ಪಂದಗಳ ಕುರಿತು ಪ್ರಶ್ನೆಯನ್ನು ಕೇಳಲಾಗಿದೆ ಎಂದು ವರದಿ ತಿಳಿಸಿದೆ.

“ನಿಷೇಧವಿದ್ದರೂ ವಿವಿಧ ಹೆಸರಿನಲ್ಲಿ ಈ ವೇದಿಕೆಗಳು ಸೆಲೆಬ್ರಿಟಿಗಳು ಮತ್ತು ಪ್ರಭಾವಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದೆ” ಎಂದು ಇಡಿ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿ ತಿಳಿಸಿದೆ.
ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಪ್ರತಿನಿಧಿಗಳು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಊರ್ವಶಿ ರೌಟೇಲಾ ಮತ್ತು ಸೋನು ಸೂದ್ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಜಾಹೀರಾತು ಪ್ರಚಾರಗಳನ್ನು ನಡೆಸಲು ವಿವಿಧ ಕಂಪನಿಗಳು 50 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಪಾವತಿಸಿದೆ ಎಂದು ED ಮೂಲಗಳು ಸೂಚಿಸಿವೆ.

ಕೋರ್ಟ್ ಆವರಣದಲ್ಲೇ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅರೆಸ್ಟ್..! ಬಾಲಕನ ಅಪಹರಣ ಪ್ರಕರಣಕ್ಕೆ​ ಟ್ವಿಸ್ಟ್..!

ಮಂಗಳೂರು: ತಂದೆ ಸೇದಿ ಎಸೆದಿದ್ದ ಬೀಡಿ ತುಂಡು ನುಂಗಿ 10 ತಿಂಗಳ ಮಗು ಸಾವು..! ಗಂಡನ ವಿರುದ್ಧ ದೂರು ನೀಡಿದ ಮಗುವಿನ ತಾಯಿ..!

See also  ಕರಾವಳಿ ಅಭಿವೃದ್ಧಿ ಕಡೆಗಣಿಸಿದ್ರೆ ಮಂಗಳೂರಿನಲ್ಲಿ ಪ್ರತ್ಯೇಕ ವಿಧಾನಸೌಧ ಎಚ್ಚರಿಕೆ!! ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆಗೆ ಸ್ಪೀಕರ್‌ ಹೇಳಿದ್ದೇನು!!
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget