ನ್ಯೂಸ್ ನಾಟೌಟ್: ಸಿಂಗಾಪುರದಲ್ಲಿ ಇತ್ತೀಚೆಗೆ ನಡೆದ 16ನೇ ಅಂತಾರಾಷ್ಟ್ರೀಯ ‘ಏಷ್ಯನ್ ಫೆಸಿಫಿಕ್ ಶಿಟೊರಿಯೋ ಕರಾಟೆಡೊ’ ಕೂಟದ ಕುಮಿಟೆ ವಿಭಾಗದಲ್ಲಿ ಸುಳ್ಯದ ವರ್ಷಿತ್ ಎಂ.ಎನ್. ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಸುಳ್ಯದ ಕೆವಿಜಿ ಐಪಿಎಸ್ 10ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ಸುಳ್ಯದ ಮಂಡೆಕೋಲು ವಸಂತ್ ಕುಮಾರ್ ಮೀನಗದ್ದೆ ಮತ್ತು ಜಯಶ್ರೀ ದಂಪತಿಗಳ ಪುತ್ರರಾಗಿದ್ದಾರೆ.