ನ್ಯೂಸ್ ನಾಟೌಟ್ : ಸುಳ್ಯ ಎಂ ಜಿ ಎಂ ಶಾಲಾ ಕ್ರೀಡಾಗಣದಲ್ಲಿ ಅ 26,27 ರಂದು ನಡೆಯಲಿರುವ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕ್ರೀಡಾ ಕೂಟದ ಆಮಂತ್ರಣ ಪತ್ರಿಕೆಯನ್ನು ಸಂತ ಜೋಸೆಫ್ ಶಾಲಾ ಸಂಚಾಲಕ ರೆ. ಫಾ. ವಿಕ್ಟರ್ ಡಿ ಸೋಜಾ ಬಿಡುಗಡೆಗೊಳಿಸಿದರು. ಇದೇ ವೇಳೆ ಅವರು ಕಾರ್ಯಕ್ರಮಕ್ಕೆ ಹೃದಯ ತುಂಬಿ ಶುಭ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಬಿನೋಮ, ಪೋಷಕರ ಸಂಘದ ಅಧ್ಯಕ್ಷ ಜೆ ಕೆ ರೈ, ಭವ್ಯ, ಆರ್ಥಿಕ ಸಮಿತಿಯ ಪ್ರಸನ್ನ ಪೀಟರ್, ಕೆ ಟಿ ವಿಶ್ವನಾಥ್, ಡೇವಿಡ್ ಧೀರ ಕ್ರಾಸ್ತ, ನವೀನ್ ಮಚಾದೋ,ಸಿಸ್ಟರ್ ಅಂತೋನಿ ಮೇರಿ, ಶಿಕ್ಷಕರಾದ ಕೊರಗಪ್ಪ, ಪುಷ್ಪವೇಣಿ, ಅನಿತಾ, ಶೋಭಾ, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು. ಸಿಸ್ಟರ್ ಅಂತೋನಿ ಮೇರಿ ಸ್ವಾಗತಿಸಿ ಪುಷ್ಪವೇಣಿ ವಂದಿಸಿದರು. ದೈಹಿಕ ಶಿಕ್ಷಕ ಕೊರಗಪ್ಪ ಕಾರ್ಯಕ್ರಮ ನಿರೂಪಿಸಿದರು.