ಅರಂತೋಡು : ಅರಂತೋಡು ತಿರುವಿನಲ್ಲಿ ಕಲ್ಲುಗುಂಡಿಯಿಂದ ಸುಳ್ಯ ಕಡೆಗೆ ಹೋಗುತ್ತಿದ್ದ ಕಾರು ಹಾಗೂ ಸುಳ್ಯ ದಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಇಕ್ಕೊ ಕಾರು ನಡುವೆ ಮುಖಾ ಮುಖಿ ಡಿಕ್ಕಿಯಾಗಿ ಎರಡೂ ಕಾರಿನ ಪ್ರಯಾಣಿಕರಿಗೆ ಗಂಭೀರವಾಗಿ ಗಾಯವಾದ ಘಟನೆ ವರದಿಯಾಗಿದೆ. ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಳ್ಯ ಪೊಲೀಸರು ಜಖಂಗೊಂಡ ಕಾರುಗಳನ್ನು ಠಾಣೆಯ ಆವರಣದೊಳಗೆ ತಂದಿರಿಸಿದ್ದಾರೆ. ಗಾಯಳುಗಳ ಮಾಹಿತಿ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.