ನಮ್ಮಲ್ಲೇ ಫಸ್ಟ್

ಗ್ರಾಹಕರಿಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಇಂದು ಕೊನೆಯ ಅವಕಾಶ

1.1k

ಮಂಗಳೂರು: ರೇಷನ್ ಕಾರ್ಡ್‌ ತಿದ್ದು ಪಡಿಗೆ ಇಂದು ಒಂದು ದಿನಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ. ಬಿಪಿಎಲ್ , ಎಪಿಎಲ್ ಎಲ್ಲ ಪಡಿತರಿಗೂ ಅವಕಾಶ ನೀಡಲಾಗಿದೆ. ಪಡಿತರ ಚೀಟಿಯಲ್ಲಿ ಬದಲಾವಣೆ ಆಗಬೇಕಿದೆ. ವಿಳಾಸ, ಸದಸ್ಯರ ಸೇರ್ಪಡೆ, ಅಂತಹವರು ನಿಮ್ಮ ಊರಿನ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ( CSc), ಪಂಚಾಯತ್ ,ಸೈಬರ್ ಕೇಂದ್ರಗಳನ್ನು ಕೂಡಲೇ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಇಂದು ಸಂಜೆ ತನಕ ಪಡಿತರ ಚೀಟಿಯಲ್ಲಿ ಬದಲಾವಣೆಗೆ ಮೈಸೂರು ಮತ್ತು ಬೆಳಗಾವಿ ಡಿವಿಷನ್ ಅಡಿಯಲ್ಲಿ ಬರುವ ಎಲ್ಲ ಜಿಲ್ಲೆಗಳ ಜನರಿಗೆ ಅವಕಾಶ ವಿರುತ್ತದೆ ಎಂದು ನ್ಯೂಸ್ ನಾಟೌಟ್ ಗೆ ಮೂಲಗಳು ತಿಳಿಸಿವೆ. ದಕ್ಷಿಣ ಕನ್ನಡ, ಕೊಡಗು, ಉಡುಪಿ, ಮಂಡ್ಯ, ಮೈಸೂರು, ಉತ್ತರ ಕನ್ನಡ , ವಿಜಯಪುರ, ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಧಾರವಾಡ, ಗದಗ , ಹಾಸನ , ಹಾವೇರಿ ಜಿಲ್ಲೆಯ ಜನರು ಸದುಪಯೋಗ ಪಡೆಯಬಹುದಾಗಿದೆ.

See also  ಪ್ರೊ ಕಬಡ್ಡಿ ಎಂಟನೇ ಆವೃತ್ತಿ ಲೀಗ್: ಪೂರ್ಣ ಆವೃತ್ತಿಗೆ ಬೆಂಗಳೂರು ಆತಿಥ್ಯ
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget