ಕರಾವಳಿಸುಳ್ಯ

ಕನಕಮಜಲಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಮರ ಬಿದ್ದು ಭಾರಿ ಟ್ರಾಫಿಕ್ ಜಾಮ್ , ತುರ್ತು ಪರಿಸ್ಥಿತಿಯಲ್ಲಿದ್ದ ಆಂಬ್ಯುಲೆನ್ಸ್ ನಲ್ಲಿದ್ದವರ ಪರದಾಟ

ನ್ಯೂಸ್ ನಾಟೌಟ್: ಕನಕಮಜಲಿನ ಸುಣ್ಣ ಮೂಲೆ ಎಂಬಲ್ಲಿ ರಸ್ತೆಗೆ ಭಾರೀ ಗಾತ್ರದ ಮರಬಿದ್ದು ಟ್ರಾಫಿಕ್ ಆಗಿದ್ದರೆ ಮತ್ತೊಂದು ಕಡೆ ಮಂಗಳೂರಿಗೆ ತುರ್ತು ಪರಿಸ್ಥಿತಿಯಲ್ಲಿ ರೋಗಿಯನ್ನು ಕರೆದುಕೊಂಡು ಹೊರಟ್ಟಿದ್ದ ಆಂಬ್ಯುಲೆನ್ಸ್ ಒಂದು ಸಿಕ್ಕಿ ಹಾಕಿಕೊಂಡಿತ್ತು. ಬಳಿಕ ಆಂಬ್ಯುಲೆನ್ಸ್ ಪೈಚಾರ್, ಬೆಳ್ಳಾರೆ ಮೂಲಕವಾಗಿ ಒಂದು ಸುತ್ತು ಹೆಚ್ಚುವರಿಯಾಗಿ ತಿರುಗಿಕೊಂಡು ಪುತ್ತೂರು ಕಡೆಗೆ ಹೋಗಬೇಕಾಯಿತು ಎಂದು ತಿಳಿದು ಬಂದಿದೆ.

ಆಂಬ್ಯುಲೆನ್ಸ್ ಮಡಿಕೇರಿಯಿಂದ ಮಂಗಳೂರು ಕಡೆಗೆ ಹೊರಟಿತ್ತು ಎಂದು ತಿಳಿದುಬಂದಿದೆ. ಸದ್ಯ ಘಟನಾ ಸ್ಥಳದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನಗಳೆಲ್ಲ ಸಾಲಾಗಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಲೈನ್ ಗಳು ಕೂಡ ತುಂಡಾಗಿದೆ ಎಂದು ಮಾಹಿತಿ ದೊರೆತಿದೆ.

Related posts

ಮಜಾಭಾರತ ಖ್ಯಾತಿಯ ಜಗ್ಗಪ್ಪ-ಸುಶ್ಮಿತಾಗೆ ಡಿವೋರ್ಸ್? ಆ್ಯಂಕರ್ ಅನುಶ್ರೀ ಬಳಿ ಜಗ್ಗಪ್ಪ ಹೇಳಿದ್ದೇನು?

ಸುಳ್ಯ: ಗ್ಯಾರೇಜ್ ಮಾಲಕರ ಸಂಘದ ವಾರ್ಷಿಕ ಮಹಾಸಭೆ

ದಕ್ಷಿಣ ಕನ್ನಡ: ದಿಢೀರ್ ಏರಿಕೆ ಕಂಡ ಅಡಿಕೆ ಧಾರಣೆ, ಇಲ್ಲಿದೆ ಸಂಪೂರ್ಣ ಮಾಹಿತಿ