ನ್ಯೂಸ್ ನಾಟೌಟ್: ಕೆಲವರಿಗೆ ಕೆಟ್ಟ ಮೇಲೆಯೂ ಬುದ್ದಿ ಬರುವುದಿಲ್ಲ ಅನ್ನಿಸುತ್ತೆ. ಇಲ್ಲೊಬ್ಬ ಆಟೋ ಚಾಲಕ ಹಿಂದೂ ಯುವತಿಯ ಫೋನ್ ನಂಬರ್ ಕೇಳಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಕೂಡ ಇದೀಗ ಪೊಲೀಸ್ ಠಾಣೆಯಲ್ಲಿ ನೆರೆದಿದ್ದಾರೆ.
ಅನ್ಯಕೋಮಿನ ಅಜ್ಜಾವರ ಅಡ್ಪಂಗಾಯದ ರಿಕ್ಷಾ ಡ್ರೈವರ್ ಓರ್ವ ಸುಳ್ಯದ ಪೆಟ್ರೋಲ್ ಪಂಪ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮರ್ಕಂಜದ ಹಿಂದೂ ಹುಡುಗಿಯ ಜೊತೆ ಮಾತನಾಡಿದ್ದಾನೆ. ಈ ವೇಳೆ ಆಕೆಯ ಫೋನ್ ನಂಬರ್ ಕೇಳಿದ್ದಾನೆ. ಈ ವಿಚಾರವನ್ನ ಆಕೆ ಹಿಂದೂ ಸಂಘಟನೆಯವರ ಗಮನಕ್ಕೆ ತಂದಿದ್ದಾಳೆ ಎನ್ನಲಾಗಿದೆ. ತಕ್ಷಣ ಆತನ ವಿರುದ್ಧ ದೂರು ಕೊಡಲಾಗುತ್ತದೆ. ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ಹಾಗೂ ಆಕೆಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.