ಕ್ರೈಂ

ಮಾರಣಾಂತಿಕ ಹಲ್ಲೆ ಹಾಗೂ ಜಾತಿ ನಿಂದನೆ: ಇಬ್ಬರನ್ನು ಬಂಧಿಸಿದ ಸುಳ್ಯ ಪೊಲೀಸರು

ಸುಳ್ಯ : ಮಾರಣಾಂತಿಕ ಹಲ್ಲೆ ಹಾಗೂ ಜಾತಿ ನಿಂದನೆ ಮಾಡಿರುವ ಘಟನೆ ತಾಲೂಕಿನ ತೊಡಿಕಾನದಲ್ಲಿ ನಡೆದಿದೆ. ಈ ಬಗ್ಗೆ ಸುಳ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 8 ರಂದು ಸಂಜೆ 5.30 ರ ಸುಮಾರಿಗೆ ತೊಡಿಕಾನ ಗ್ರಾಮದ ಅಡ್ಯಡ್ಕ ನಿವಾಸಿಯಾದ ಕೃಷ್ಣ ಎನ್. ಎಂಬ ಯುವಕನಿಗೆ ತೊಡಿಕಾನ ನಿವಾಸಿಗಳಾದ ಪ್ರದೀಪ್ ಮತ್ತು ದಾಮೋದರ ಎಂಬವರು ಜಾತಿ ನಿಂದನೆ ಮಾಡಿ, ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಹಲ್ಲೆಗೊಳಗಾದ ಯುವಕ ಅಂಬೇಡ್ಕರ್ ರಕ್ಷಣಾ ವೇದಿಕೆಗೆ ದೂರು ನೀಡಿದ ಮೇರೆಗೆ ಸುಳ್ಯ ಠಾಣೆಗೆ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಹಾಗೂ ತಾಲೂಕು ಅಧ್ಯಕ್ಷ ಮೋಹನ್ ಕುಮಾರ್ ಅಡ್ಕಬಳೆ ಪೊಲೀಸ್ ಠಾಣೆಗೆ ತೆರಳಿ, ಹೊಡೆದವರ ಮೇಲೆ ಎಫ್‌ಐಆರ್ ದಾಖಲಿಸುವಂತೆ ವಿನಂತಿಸಿಕೊಂಡಿದ್ದರು. ಸುಳ್ಯ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ಪೋಲಿಸರು ಆರೋಪಿ ಗಳನ್ನು ಬಂಧಿಸಿದ್ದಾರೆ.

Related posts

ಕೇಜ್ರಿವಾಲ್​ ಜೈಲಿನಿಂದಲೇ ಸರ್ಕಾರ ನಡೆಸಲಿದ್ದಾರೆ ಎಂದ ಮುಖಂಡರು..! ದೆಹಲಿ ಸಿಎಂ ಬದಲಾಗ್ತಾರಾ..?

ಮಂಡೆಕೋಲು: ಕೆಲಸ ಕೊಟ್ಟ ಯಜಮಾನನ ಮನೆಯಿಂದಲೇ ತೆಂಗಿನಕಾಯಿ ಕದ್ದ ಕೆಲಸದಾಳು..! ಮುಂದೆ ಆಗಿದ್ದೇನು ಗೊತ್ತಾ..?

110 ಮಂದಿ ಪ್ರಯಾಣಿಕರಿದ್ದ ವಿಮಾನ ಭೀಕರ ಪತನ..! ಇಲ್ಲಿದೆ ವೈರಲ್ ವಿಡಿಯೋ