ಕರಾವಳಿಸುಳ್ಯ

ಸುಳ್ಯದ ಪೈಚಾರಿನಲ್ಲಿ ಅಂಗಡಿಗೆ ನುಗ್ಗಿದ ಕಾರು! ಅಂಗಡಿ ಮಾಲಿಕ ಸ್ವಲ್ಪದರಲ್ಲೆ ಪಾರು!

ನ್ಯೂಸ್ ನಾಟೌಟ್: ಚಾಲಕನ ನಿಯಂತ್ರಣ ತಪ್ಪಿ ಕಾರೋಂದು ಸೆಕೆಂಡ್ ಮಾರ್ಕೆಟ್ ಎಂಬ ಅಂಗಡಿಗೆ ನುಗ್ಗಿದ ಘಟನೆ ಸುಳ್ಯದ ಪೈಚಾರಿನಲ್ಲಿ ಶುಕ್ರವಾರ ವರದಿಯಾಗಿದೆ.

ಸುಳ್ಯದಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ವಾಹನ ಇದಾಗಿದ್ದು, ಅತಿಯಾದ ವೇಗಕ್ಕೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪೈಚಾರು ಸಮೀಪ ರಸ್ತೆ ಬದಿಯಲ್ಲಿದ್ದ ಸೆಕೆಂಡ್ ಮಾರ್ಕೆಟ್ ಎಂಬ ಅಂಗಡಿಗೆ ನುಗ್ಗಿದೆ.

ಅಂಗಡಿಗೆ ಭಾರಿ ಹಾನಿಯಾಗಿದ್ದು, ಅಂಗಡಿ ಮಾಲಿಕ ರಶೀದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಸುಳ್ಯ: ಕೆ.ವಿ.ಜಿ ಕ್ಯಾಂಪಸ್‌ನಲ್ಲಿ ಹೃನ್ಮನಗಳ ಪುಳಕಿಸಿದ ಯೋಗ, ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಯೋಗ ದಿನದ ಸಂಭ್ರಮ

ಜುಲೈ 19 ರಂದು ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಆಚರಣೆ,ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಿಂದ ಮಾಹಿತಿ

ಅಮರ ಸಂಘಟನಾ ಸಮಿತಿ (ರಿ) ಸುಳ್ಯ ವತಿಯಿಂದ ಚೊಕ್ಕಾಡಿ ಪ್ರೌಢಶಾಲೆಗೆ ಫ್ಯಾನ್ ಹಸ್ತಾಂತರ